ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. ಕೊರೊನಾದಿಂದ ದೂರ ಇರಲು ವ್ಯಾಕ್ಸಿನ್ ಒಂದೇ ದಾರಿ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗುತ್ತಿಲ್ಲ, ಈಗಾಗಲೇ ಲಸಿಕೆಯನ್ನ ಪಡೆದುಕೊಂಡ 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಪರದಾಡುವಂತಾಗಿದೆ. ಈ ಮೂಲಕ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಅಭಾವ ಶುರುವಾಗಿದೆ. ಕೆಲವರು ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಆದರೆ ಈ ವ್ಯಾಕ್ಸಿನ್ ಕೊರತೆಯ ಹಿಂದೆ ಬೇರೆಯದ್ದೇ ಹುನ್ನಾರ ಇದೆಯಾ ಅನ್ನೋ ಅನುಮಾನ ಶುರುವಾಗಿದೆ.

ಈ ಎಲ್ಲಾ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿವೆ ಬೆಂಗಳೂರಿನ ಖ್ಯಾತ ವೈದ್ಯ ಡಾ. ದಿನೇಶ್ ರಾವ್ ನೀಡಿರುವ ಮಾಹಿತಿಗಳು. ಡಾ. ದಿನೇಶ್ ರಾವ್ ಅವರು ತಮ್ಮ ಯೂಟ್ಯೂಬ್​ನಲ್ಲಿ ಮೆಡಿಕಲ್ ಮಾಫಿಯಾ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಡಾ.ದಿನೇಶ್ ರಾವ್ ಹೇಳೋದೇನು..?
ವ್ಯಾಕ್ಸಿನೇಷನ್ ಬಗ್ಗೆ ದೇಶದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ. ದೇಶದೆಲ್ಲೆಡೆ ವ್ಯಾಕ್ಸಿನ್ ಔಟ್​ ಆಫ್ ಸ್ಟಾಕ್​ ಆಗಿದೆ. ಈ ಬಗ್ಗೆ ನಮ್ಮ ತಂಡ ತನಿಖೆ ಆರಂಭಿಸಿದ ಬಳಿಕ ನಿಜಕ್ಕೂ ನಮಗೆ ಶಾಕ್ ಆಗಿದೆ. ವಿಶ್ವದೆಲ್ಲೆಡೆ ಭಯಾನಕ ರೀತಿಯಲ್ಲಿ ವ್ಯಾಕ್ಸಿನ್ ಮಾಫಿಯಾ ನಡೆಯುತ್ತಿದೆ. ವ್ಯಾಕ್ಸಿನ್ ಪ್ರೊಡೆಕ್ಷನ್, ಪೊಟೆನ್ಸಿ ಆಫ್ ವ್ಯಾಕ್ಸಿನ್, ರೆಸ್ಪಿ ಆಫ್ ದ ವ್ಯಾಕ್ಸಿನ್, ದ ರಾ ಮೆಟೆರಿಯಲ್ ಆಫ್ ವ್ಯಾಕ್ಸಿನ್ ಇವೆಲ್ಲವನ್ನೂ ಕೇವಲ ಎರಡು ದೇಶಗಳು ನಿಯಂತ್ರಣದಲ್ಲಿ ಇಟ್ಟುಕೊಂಡಿವೆ. ಒಂದು ಯುನೈಟೆಡ್ ಕಿಂಗ್​ಡಮ್, ಇನ್ನೊಂದು ಅಮೆರಿಕ.

ಈ ಎರಡೂ ದೇಶಗಳು ವ್ಯಾಕ್ಸಿನ್ ಪ್ರಕ್ರಿಯೆಗಳನ್ನ ಜಗತ್ತಿನೆಲ್ಲೆಡೆ ನಿಯಂತ್ರಣಕ್ಕೆ ತೆದುಕೊಂಡಿವೆ. ಇದಕ್ಕೆ ಪೂರಕ ಎನ್ನುವಂತೆ ಅಮೆರಿಕ ದೇಶವು ಈಗಾಗಲೇ ಬರೋಬ್ಬರಿ 515 ಮಿಲಿಯನ್ ಡೋಸ್ ವ್ಯಾಕ್ಸಿನ್ ಅನ್ನ ಸಂಗ್ರಹಣ ಮಾಡಿಕೊಂಡಿದೆ. ಈ ಎಲ್ಲಾ ವ್ಯಾಕ್ಸಿನ್ ಅನ್ನ ಅಮೆರಿಕ ಹೆಚ್ಚುವರಿಯಾಗಿ ಇಟ್ಟುಕೊಂಡಿದೆ. ಈ ಇಷ್ಟೊಂದು ವ್ಯಾಕ್ಸಿನ್ ಅನ್ನ ಅಮೆರಿಕ ಯಾವತ್ತೂ, ಯಾರಿಗೂ, ಯಾವ ದೇಶಕ್ಕೂ ನೀಡಲು ಸಂಗ್ರಹಿಸಿ ಇಟ್ಟುಕೊಂಡಿಲ್ಲ.

ಅದೇ ರೀತಿ ಲಂಡನ್ 110 ಮಿಲಿಯನ್ ಡೋಸ್​ಗಳನ್ನ ಸಂಗ್ರಹಿಸಿ ಇಟ್ಟುಕೊಂಡಿದೆ. ಈ ಪರಿಯ ವ್ಯಾಕ್ಸಿನ್ ಅನ್ನ ಅದು ಬೇರೆ ದೇಶಗಳಿಗೆ ರಫ್ತು ಮಾಡಲು ಇಟ್ಟುಕೊಂಡಿಲ್ಲ. ಆದರೆ ಭಾರತದಲ್ಲಿ ಹಾಗಿಲ್ಲ, ಶೇಕಡಾ 44 ಪರ್ಸೆಂಟ್ ವ್ಯಾಕ್ಸಿನ್ ಅನ್ನ ಬಡ ರಾಷ್ಟ್ರಗಳಿಗೆ ಶೇರ್ ಮಾಡಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ದೂರವಾಣಿ ಕರೆ ಮಾಡಿ ವ್ಯಾಕ್ಸಿನ್ ಕಚ್ಚಾ ವಸ್ತುಗಳ ಎಕ್ಸ್​ಪೋರ್ಟ್​ಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಸ್ವಲ್ಪ ಕಚ್ಚಾ ವಸ್ತು ಪೂರೈಸಿರುವ ಅಮೆರಿಕಾ, ಕಳೆದ ಫೆಬ್ರವರಿ ನಂತರ ಕಚ್ಚಾ ವಸ್ತುಗಳ ರಫ್ತಿಗೆ ತಡೆ ಹಿಡಿದಿದೆ. ಮಾತ್ರವಲ್ಲ ಇಂಟರ್​ ನ್ಯಾಷನಲ್ ರಿಲೀಸ್ ಆಫ್ ವ್ಯಾಕ್ಸಿನ್ ಪೇಟೆಂಟ್​ ಅನ್ನ ಅಮೆರಿಕ ಜಗತ್ತಿನಾದ್ಯಂತ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಈ ಮೂಲಕ ತನ್ನ ಕೊಲೊನಿಯಲ್​ ಅಜೆಂಡಾವನ್ನ ಎರಡೂ ದೇಶಗಳು ಜಾರಿಗೆ ಯತ್ನಿಸುತ್ತಿವೆ. ಭಾರತಕ್ಕೂ ವ್ಯಾಕ್ಸಿನ್​ ರಫ್ತು ತಡೆ ಮಾಡುವಂತೆ ಒತ್ತಾಯ ಮಾಡುತ್ತಿವೆ.

ಸದ್ಯ ವಿಶ್ವದಲ್ಲಿ ಒಂದು ದಿನಕ್ಕೆ ವ್ಯಾಕ್ಸಿನೇಷನ್ ಆಗುತ್ತಿರುವ 18.5 ಮಿಲಿಯನ್ ಆಗುತ್ತಿದೆ. ಈ ರೀತಿಯ ನಿಧಾನಗತಿಯಿಂದಾದ್ರೆ ಶೇಕಡಾ 75 ರಷ್ಟು ಆಗಲು ಇನ್ನೂ 20 ತಿಂಗಳುಗಳ ಕಾಲ ತೆಗೆದುಕೊಳ್ಳಲಿದೆ. ಈ ಮೂಲಕ ಜಗತ್ತಿನಾದ್ಯಂತ ವ್ಯಾಕ್ಸಿನೇಷನ್ ಮುಗಿಯಲು ಬರೋಬ್ಬರಿ ಎರಡು ವರ್ಷಗಳು ತೆಗೆದುಕೊಳ್ಳಲಿದೆ. ಇದು ಹೀಗೆ ಆದರೆ ಭಾರತದಲ್ಲಿರುವ ಶೇಕಡಾ 75 ಮಂದಿಗೆ ವ್ಯಾಕ್ಸಿನ್ ನೀಡಲು 10 ತಿಂಗಳು ಬೇಕಾಗಬಹುದು.

The post ಭಾರತದಲ್ಲಿ ವ್ಯಾಕ್ಸಿನ್ ಉತ್ಪಾದನೆಗೆ ತಡೆಯೊಡ್ಡಿದ್ದೇ ಅಮೆರಿಕಾ, ಇಂಗ್ಲೆಂಡ್; ಮಾಹಿತಿ ಬಿಚ್ಚಿಟ್ಟ ಡಾ.ದಿನೇಶ್ ರಾವ್ appeared first on News First Kannada.

Source: newsfirstlive.com

Source link