ಭಾರತದಲ್ಲಿ 5ಜಿ ತಂತ್ರಜ್ಞಾನ ಹೊಂದಿರುವ ಐಫೋನ್ 12 ಉತ್ಪಾದನೆಗೆ ಆ್ಯಪಲ್ ಕಂಪನಿ ಮುಂದಾಗಿದೆ. ಚೆನ್ನೈ ಬಳಿಯಿರುವ ಆ್ಯಪಲ್‌ನ ತೈವಾನೀ ಮೂಲದ ಗುತ್ತಿಗೆ ತಯಾರಕ ಫಾಕ್ಸ್‌ಕಾನ್‌ನ ಭಾರತೀಯ ಘಟಕವು ಈ ಫೋನ್‍ ತಯಾರಿಸಲಿದೆ.

ಕಳೆದ ವರ್ಷ (2020) ಹೈಯರ್ ಎಂಡ್ ಪ್ರೊಸೆಸರ್ ಹೊಂದಿರುವ ‘5ಜಿ ಆ್ಯಪಲ್ 12 ’  ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಅಮೆರಿಕದಲ್ಲಿ ಇದರ ಆರಂಭಿಕ ಬೆಲೆ Rs 66,000. ತೆರಿಗೆ ಒಳಗೊಂಡು ಭಾರತದಲ್ಲಿ ಇದೇ ಫೋನ್ ಗ್ರಾಹಕರ ಕೈಗೆ Rs 79,900 ದೊರೆಯುತ್ತಿದೆ. ಸದ್ಯ 13,900 ಹೆಚ್ಚುವರಿ ಮೊತ್ತ ನೀಡಿ ಭಾರತೀಯರು ಐಫೋನ್12 ಖರೀದಿಸಬೇಕಾಗುತ್ತದೆ. ಇದೀಗ ಭಾರತದಲ್ಲಿಯೇ ಈ ಫೋನ್ ಉತ್ಪಾದನೆಯಾಗುವುದರಿಂದ ಬೆಲೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಭಾರತದಲ್ಲಿ 2017 ರಿಂದ ಐಪೋನ್ ಎಸ್‍ಇ ಮೊಬೈಲ್ ಉತ್ಪಾದನೆ ಪ್ರಾರಂಭವಾಯಿತು. ನಂತರ ಐಫೋನ್ 6ಎಸ್, ಐಫೋನ್ 7, ಐಫೋನ್ ಎಕ್ಸ್ ಆರ್, ಐಫೋನ್ 11 ಸಿದ್ಧಗೊಳ್ಳುತ್ತಿವೆ. ಇದೀಗ ಇವುಗಳ ಸಾಲಿಗೆ ಐಫೋನ್ 12 ಸೇರುತ್ತಿದೆ. ಈ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ಐಫೋನ್ 12 ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಆ್ಯಪಲ್ ತಿಳಿಸಿದೆ.

5ಜಿ ಐಫೋನ್ 12 ವಿಶೇಷತೆಗಳೇನು ?

6.1 ಇಂಚು ಡಿಸ್‌ಪ್ಲೇ ಇರುವ ‘ಐಫೋನ್‌ 12’, ಗಾತ್ರದಲ್ಲಿ ಐಫೋನ್‌ 11 ಮಾದರಿಯಂತೆಯೇ ಕಂಡರೂ ಇನ್ನಷ್ಟು ಹಗುರ ಮತ್ತು ತೆಳುವಾಗಿದೆ.

ಫೋನ್‍ ಹಿಂಬದಿಯಲ್ಲಿ 12 ಎಂಪಿ ಸಾರ್ಮರ್ಥ್ಯ ಎರಡು ಕ್ಯಾಮೆರಾ ಹೊಂದಿದೆ.  ಜತೆಗೆ 12 ಎಂಪಿಯ ಫ್ರಂಟ್ ಕ್ಯಾಮೆರಾ ಇದೆ.

2815 ಎಂಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ದೀರ್ಘಕಾಲಿಕ ಚಾರ್ಜ್ ಬರಬಹುದು.

ಅತೀವೇಗದ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More