ಭಾರತದ ಅತೀ ಉದ್ದದ ಎಕ್ಸ್​​ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಿ ಮೋದಿ.. ಏನಿದರ ವಿಶೇಷತೆ..?


ಲಕ್ನೋ: ಭಾರತದ ಅತೀ ಉದ್ದದ ಎಕ್ಸ್​​ಪ್ರೆಸ್ ಮಾರ್ಗವಾಗಿರುವ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್​ಪ್ರೆಸ್ ​​ಹೆದ್ದಾರಿಯನ್ನು ಪ್ರಧಾನಿ ನರೆಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಭಾರತೀಯ ವಾಯು ಸೇನೆ ನಡೆಸಿದ ಏರ್​ಶೋವನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಕರ್ವಾಲ್ ಖೇರಿಯಲ್ಲಿರೋ 340 ಕಿಲೋ ಮೀಟರ್ ಪೂರ್ವಾಂಚಲ ಎಕ್ಸ್​ಪ್ರೆಸ್​​ ಅನ್ನು 42 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಈ ದಿನ ಉತ್ತರ ಪ್ರದೇಶ ಬೆಳವಣಿಗೆಗೆ ವಿಶೇಷ ದಿನವಾಗಿದ್ದು, ಯುಪಿಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಏನಿದರ ವಿಶೇಷ..?
ಪೂರ್ವಾಂಚಲ್ ಎಕ್ಸ್​ಪ್ರೆಸ್​​ ವೇನಲ್ಲಿ ಯುದ್ಧ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲು ಕೂಡ ಆಗಲಿದೆ. ಇದಕ್ಕಾಗಿಯೇ 3.2 ಕಿಲೋ ಮೀಟರ್ ಉದ್ದದ ಏರ್ ಸ್ಟ್ರೀಪ್ ಸಿದ್ಧಪಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಯುದ್ಧ ವಿಮಾನಗಳ ಬಳಕೆಗೆ ಸಿದ್ಧಪಡಿಸಲಾಗಿದೆ.

ಪ್ರಸ್ತುತ 6 ಪಥದ ರಸ್ತೆ ಮುಂದಿನ ದಿನಗಳಲ್ಲಿ 8 ಪಥ ರಸ್ತೆಯಾಗಿಲಿದೆ.. ಒಟ್ಟು 22,500 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಪೂರ್ವ ಉತ್ತರ ಪ್ರದೇಶದ ಲಖನೌ, ಬಾರಬಂಕಿ, ಅಯೋದ್ಯ, ಅಮೇಠಿ, ಅಂಬೆಡ್ಕರ್ ನಗರ, ಅಸ್ಂಘಡ, ಘಾಜಿಪುರ ಜಿಲ್ಲೆಯ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ.

News First Live Kannada


Leave a Reply

Your email address will not be published. Required fields are marked *