ಭಾರತ ಸರ್ಕಾರದ ಸದ್ಯದ ಆದ್ಯತೆ ಚೀನಾವೇ ಹೊರತು ಪಾಕಿಸ್ತಾನವಲ್ಲ. ಇದಕ್ಕೆ ಸಾಕ್ಷಿ ಭಾರತ-ಚೀನಾ ಗಡಿಗೆ ಕೇಂದ್ರ ಸರ್ಕಾರ 50,000 ಹೆಚ್ಚುವರಿ ಸೈನಿಕರನ್ನ ಕಳುಹಿಸಿರೋದು. ಈ ವಿಚಾರ ಈಗ ಮಹತ್ವ ಪಡೆದುಕೊಂಡಿದೆ.

ಹೆಚ್ಚುವರಿ ಸೈನಿಕರ ಜೊತೆಗೆ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಳುಹಿಸಿದೆ ಎನ್ನಲಾಗಿದೆ. ಸದ್ಯ ಚೀನಾ-ಭಾರತ ಗಡಿಯ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್​(ಎಲ್​ಎಸಿ)ನಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ. ಈ ಮೂಲಕ ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರನ್ನ ಈಗ ಚೀನಾ ಗಡಿಗೆ ಕಳಿಸಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರೋ ಅತೀ ಹೆಚ್ಚು ಸೈನಿಕರ ಸಂಖ್ಯೆ ಎಂದು ವರದಿಯಾಗಿದೆ.

ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಸುಮಾರು ಒಂದು ವರ್ಷದಿಂದಲೂ ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಗಾಲ್ವಾನ್ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಕಡಿಮೆಯಾಗಿಸಲು 11 ಸುತ್ತಿನ ಮಿಲಿಟರಿ ಮಾತುಕತೆ ನಡೆದಿದೆ. ಎರಡು ಬಾರಿ ಉಭಯ ದೇಶಗಳ ವಿದೇಶಾಂಗ ಸಚಿವರು ಮುಖಾಮುಖಿ ಭೇಟಿಯಾಗಿದ್ದಾರೆ. ಆದ್ರೆ ಎಷ್ಟೇ ಸಂಧಾನ ಸಭೆಗಳನ್ನ ನಡೆಸಿದ್ರೂ ಚೀನಾ ಮಾತ್ರ ಸಂಘರ್ಷ ಪ್ರದೇಶಗಳಿಂದ ತನ್ನ ಸೇನಾಪಡೆಯನ್ನ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿರಲಿಲ್ಲ. ಅಲ್ಲದೆ ಹೆಚ್ಚುವರಿ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನ ಗಡಿಯತ್ತ ಕಳಿಸುತ್ತಿದೆ.

ಈಗ ಭಾರತ ಕೂಡ ಹೆಚ್ಚುವರಿ ಸೈನಿಕರ ನಿಯೋಜನೆ ಮೂಲಕ ಸೇರಿಗೆ ಸವ್ವಾಸೇರು ಎನ್ನುತ್ತಿದೆ ಅಂತ ವಿಶ್ಲೇಷಿಸಲಾಗ್ತಿದೆ. ಮೂಲಗಳ ಮಾಹಿತಿ ಪ್ರಕಾರ ಭಾರತ 2 ಲಕ್ಷ ಸೈನಿಕರನ್ನ ಚೀನಾ ಗಡಿಯಲ್ಲಿ ನಿಯೋಜಿಸಿದೆ ಅಂದ್ರೆ ಚೀನಾ ಕೂಡ ಗಡಿಯಲ್ಲಿ ತನ್ನ ಸೇನಾಪಡೆ ನಿಯೋಜನೆಯನ್ನ ಹೆಚ್ಚಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ.. ಚೀನಾ ಒಡ್ಡುತ್ತಿರೋ ಬೆದರಿಕೆಗೆ ಭಾರತ ಈ ಮೂಲಕ ಉತ್ತರಿಸುತ್ತಿದೆಯಾ? ಭಾರತ ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ಯಾ ಅನ್ನೋ ಅನುಮಾನ ಮೂಡಿಸಿದೆ.

The post ಭಾರತದ ಇತಿಹಾಸದಲ್ಲೇ ಮೊದಲು ಚೀನಾ ಗಡಿಯಲ್ಲಿ 2 ಲಕ್ಷ ಟ್ರೂಪ್ ಸೈನಿಕರ ನಿಯೋಜನೆ appeared first on News First Kannada.

Source: newsfirstlive.com

Source link