ಕೋವಿನ್ ಆ್ಯಪ್
ನವದೆಹಲಿ: ಭಾರತದ ಕೊವಿಡ್ ಲಸಿಕೆಗಳ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸಲು ವಿಶ್ವದ 96 ದೇಶಗಳು ಒಪ್ಪಿಕೊಂಡಿವೆ. ಇದರಿಂದ ಭಾರತದಲ್ಲಿ ಉತ್ಪಾದನೆಯಾಗಿರುವ ಕೊವ್ಯಾಕ್ಸಿನ್ (Covaxin) ಮತ್ತು ಕೋವಿಶೀಲ್ಡ್ (Covishield) ಲಸಿಕೆಗಳನ್ನು ಪಡೆದಿರುವ ಜನರಿಗೆ ಬೇರೆ ದೇಶಗಳಿಗೆ ಪ್ರಯಾಣಿಸಲು ಇದರಿಂದ ಅನುಕೂಲವಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಹೇಳಿದ್ದಾರೆ. ಭಾರತದಲ್ಲಿ ವಿಶ್ವದ ಅತಿದೊಡ್ಡ ಕೊವಿಡ್-19 ಲಸಿಕೆ (Covid-19 Vaccine Drive) ಕಾರ್ಯಕ್ರಮದ ಫಲಾನುಭವಿಗಳನ್ನು ಸ್ವೀಕರಿಸಲು ಮತ್ತು ಗುರುತಿಸಲು ಸರ್ಕಾರವು ಪ್ರಪಂಚದ ಇತರ ಭಾಗಗಳೊಂದಿಗೆ ಸಂವಹನವನ್ನು ಮುಂದುವರೆಸಿದೆ. ಇದರಿಂದಾಗಿ ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಬೇರೆ ದೇಶಗಳಿಗೆ ತೆರಳುವವರಿಗೆ ಪ್ರಯಾಣ ಸುಗಮವಾಗುತ್ತದೆ ಎಂದು ಸಚಿವ ಮಾಂಡವಿಯಾ ತಿಳಿಸಿದ್ದಾರೆ.
ಸದ್ಯಕ್ಕೆ 96 ದೇಶಗಳು ಭಾರತದ ಕೊವಿಡ್ ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆಗೆ ಒಪ್ಪಿಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಕೋವಿಡ್ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರ ಭಾರತೀಯ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಮಾನ್ಯಗೊಳಿಸಲು ಒಪ್ಪಿದ್ದಾರೆ ಎಂದು ಮಾಂಡವೀಯ ಹೇಳಿದ್ದಾರೆ.
ವಿದೇಶಕ್ಕೆ ಪ್ರಯಾಣಿಸಲು ಬಯಸುವವರು ಅಂತಾರಾಷ್ಟ್ರೀಯ ಪ್ರಯಾಣ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು COWIN ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ. 96 ದೇಶಗಳಾದ ಕೆನಡಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಐರ್ಲೆಂಡ್, ನೆದರ್ಲ್ಯಾಂಡ್ಸ್, ಸ್ಪೇನ್, ಬಾಂಗ್ಲಾದೇಶ, ಮಾಲಿ, ಘಾನಾ, ಸಿಯೆರಾ ಲಿಯೋನ್, ಅಂಗೋಲಾ, ನೈಜೀರಿಯಾ, ಬೆನಿನ್, ಚಾಡ್, ಹಂಗೇರಿ, ಸರ್ಬಿಯಾ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ , ಸ್ಲೊವೇನಿಯಾ, ಕ್ರೊಯೇಷಿಯಾ, ಬಲ್ಗೇರಿಯಾ, ಟರ್ಕಿ, ಗ್ರೀಸ್, ಫಿನ್ಲ್ಯಾಂಡ್, ಎಸ್ಟೋನಿಯಾ, ರೊಮೇನಿಯಾ, ಮೊಲ್ಡೊವಾ, ಅಲ್ಬೇನಿಯಾ, ಜೆಕ್ ರಿಪಬ್ಲಿಕ್, ಸ್ವಿಟ್ಜರ್ಲೆಂಡ್, ಲಿಚ್ಟೆನ್‌ಸ್ಟೈನ್, ಸ್ವೀಡನ್, ಆಸ್ಟ್ರಿಯಾ, ಮಾಂಟೆನೆಗ್ರೊ, ಐಸ್‌ಲ್ಯಾಂಡ್, ಇಸ್ವಾಟಿನಿ, ರುವಾಂಡಾ, ಜಿಂಬಾಬ್ವೆ, ಉಗಾಂಡಾ, ಮಲಾವಿ, ಬೋಟ್ಸ್ವಾನ, ನಮೀಬಿಯಾ, ಕಿರ್ಗಿಜ್ ರಿಪಬ್ಲಿಕ್, ಬೆಲಾರಸ್, ಅರ್ಮೇನಿಯಾ, ಉಕ್ರೇನ್, ಅಜೆರ್ಬೈಜಾನ್, ಕಝಾಕಿಸ್ತಾನ್, ರಷ್ಯಾ, ಜಾರ್ಜಿಯಾ, ಅಂಡೋರಾ, ಕುವೈತ್, ಒಮಾನ್, ಯುಎಇ, ಬಹ್ರೇನ್, ಕತಾರ್, ಮಾಲ್ಡೀವ್ಸ್, ಶ್ರೀಲಂಕಾ ಕೊಮಾರ್, ಮಾಲ್ಡೀವ್ಸ್ , ಮಾರಿಷಸ್, ಪೆರು, ಜಮೈಕಾ, ಬಹಾಮಾಸ್ ಮತ್ತು ಬ್ರೆಜಿಲ್ ಸಹ ಭಾರತದೊಂದಿಗೆ ಕೊವಿಡ್ ಲಸಿಕೆಯ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸಲು ಒಪ್ಪಿಕೊಂಡಿವೆ.
ಗಯಾನಾ, ಆಂಟಿಗುವಾ ಮತ್ತು ಬಾರ್ಬುಡಾ, ಮೆಕ್ಸಿಕೋ, ಪನಾಮ, ಕೋಸ್ಟರಿಕಾ, ನಿಕರಾಗುವಾ, ಅರ್ಜೆಂಟೀನಾ, ಉರುಗ್ವೆ, ಪರಾಗ್ವೆ, ಕೊಲಂಬಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ, ಕಾಮನ್‌ವೆಲ್ತ್ ಆಫ್ ಡೊಮಿನಿಕಾ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ಡೊಮಿನಿಕನ್ ರಿಪಬ್ಲಿಕ್, ಹೈಟಿ, ನೇಪಾಳ, ಇರಾನ್, ರಾಜ್ಯ ಪ್ಯಾಲೆಸ್ಟೈನ್, ಸಿರಿಯಾ, ದಕ್ಷಿಣ ಸುಡಾನ್, ಟುನೀಶಿಯಾ, ಸುಡಾನ್, ಈಜಿಪ್ಟ್, ಆಸ್ಟ್ರೇಲಿಯಾ, ಮಂಗೋಲಿಯಾ ಮತ್ತು ಫಿಲಿಪೈನ್ಸ್ ಇತರ ದೇಶಗಳು ಕೂಡ ಈ 96 ದೇಶಗಳ ಪಟ್ಟಿಯಲ್ಲಿವೆ.
ಇದನ್ನೂ ಓದಿ: Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ!
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಕೊವಿಡ್ ನಿಯಮಾವಳಿಗಳು ಇಲ್ಲಿವೆ