ಭಾರತದ ಮತ್ತೊಂದು ರೆಕಾರ್ಡ್​​.. ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ನ್ಯೂ ವರ್ಷನ್​​​ ಟೆಸ್ಟ್​​ ಸಕ್ಸಸ್​​​


ನವದೆಹಲಿ: ಇಂದು ಭಾರತ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಒರಿಸ್ಸಾದ ಬಾಲಸೋರ್‌ ಎಂಬ ಕರಾವಳಿಯಲ್ಲಿ ಬ್ರಹ್ಮೋಸ್ ಮಿಸೈಲ್​​ನ ನ್ಯೂ ವರ್ಷನ್​​​ ಟೆಸ್ಟ್​ ಸಕ್ಸಸ್​​ ಆಗಿ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಮೂಲಗಳು ತಿಳಿಸಿವೆ.

ಬ್ರಹ್ಮೋಸ್​​​ ಮಿಸೈಲ್​​ನ ಈ ಹೊಸ ವರ್ಷನ್​​ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಹಿಂದೆ ಜನವರಿ 11ನೇ ತಾರೀಕಿನಂದೇ ಭಾರತ ನೌಕಾಪಡೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿ ಉಡಾವಣೆ ಮಾಡಿತ್ತು. ಈಗ ಇದರ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮಿಸೈಲ್​​​​ ಭಾರತ ಮತ್ತು ರಷ್ಯಾ ಎರಡು ದೇಶಗಳು ಸೇರಿ ತಯಾರಿಸಿವೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇದರ ಸಂಪೂರ್ಣ ಹೊಣೆ ಹೊತ್ತಿದೆ.

News First Live Kannada


Leave a Reply

Your email address will not be published. Required fields are marked *