ಭಾರತದ ಮುಂದೆ ಮಂಡಿಯೂರಿದ ಬ್ರಿಟನ್; ‘ಲಸಿಕೆ ಪಡೆದ್ರೂ ಕ್ವಾರಂಟೀನ್ ಕಡ್ಡಾಯ’ ಆದೇಶ ವಾಪಸ್

ನವದೆಹಲಿ: ಈ ಹಿಂದೆ ಭಾರತದಿಂದ ಬ್ರಿಟನ್​ಗೆ ಬಂದಿಳಿಯುವ ಪ್ರಯಾಣಿಕರು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದರೂ ಸಹ ಅವರನ್ನು ಕಡ್ಡಾಯ ಕ್ವಾರಂಟೀನ್​ನಲ್ಲಿ ಇರಿಸಲಾಗುವುದು ಎಂದು ಬ್ರಿಟನ್ ಸರ್ಕಾರ ಹೇಳಿತ್ತು. ಈ ಮೂಲಕ ಭಾರತದ ವ್ಯಾಕ್ಸಿನ್​ಗಳನ್ನು ಪರೋಕ್ಷವಾಗಿ ಅನುಮಾನಿಸಿತ್ತು. ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದ ಭಾರತ ಸರ್ಕಾರ ಬ್ರಿಟನ್​ನಿಂದ ಬಂದಿಳಿಯುವ ಬ್ರಿಟನ್ ಪ್ರಜೆಗಳಿಗೆ ಕಡ್ಡಾಯ ಕ್ವಾರಂಟೀನ್ ವಿಧಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಬ್ರಿಟನ್ ಸರ್ಕಾರ ಭಾರತ ಸರ್ಕಾರದ ಮುಂದೆ ತಲೆಬಾಗಿದೆ. ಅಕ್ಟೋಬರ್ 11 ರಿಂದ ಭಾರತದಿಂದ ಬ್ರಿಟನ್​ಗೆ ಬಂದಿಳಿಯುವ ಪ್ರಯಾಣಿಕರನ್ನು ಇನ್ನುಮುಂದೆ ಕ್ವಾರಂಟೀನ್​ನಲ್ಲಿ ಇರಿಸೋದಿಲ್ಲ ಎಂದು ಹೇಳಿದೆ. ಈ ಕುರಿತು ಮಾಹಿತ ನೀಡಿರುವ ಬ್ರಿಟನ್​ನ ಭಾರತೀಯ ರಾಯಭಾರಿ ಅಲೆಕ್ಸ್ ಎಲ್ಲಿಸ್ ಕೋವಿಶೀಲ್ಡ್ ಅಥವಾ ಇನ್ಯಾವುದೇ ಬ್ರಿಟನ್ ಅನುಮೋದನೆ ಪಡೆದ ವ್ಯಾಕ್ಸಿನ್​ಗಳನ್ನು ಸಂಪೂರ್ಣವಾಗಿ ಪಡೆದುಕೊಂಡವರಿಗೆ ಕ್ವಾರಂಟೀನ್ ಇರುವುದಿಲ್ಲ ಎಂದಿದ್ದಾರೆ. ಮುಂದುವರೆದು ಕಳೆದ ತಿಂಗಳಲ್ಲಿ ಈ ವಿಚಾರವಾಗಿ ಭಾರತ ಸರ್ಕಾರ ನಿಕಟ ಸಂಪರ್ಕ ಹೊಂದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

 

ಈ ಹಿಂದೆ  ಭಾರತೀಯರ ಕೊರೊನಾ ಲಸಿಕೆ ಪ್ರಮಾಣ ಪತ್ರದ ಬಗ್ಗೆ ನಮಗೆ ಸಂಪೂರ್ಣ ಸಹಮತ ಇಲ್ಲ ಎಂದು ಯುಕೆ  ಸರ್ಕಾರ (ಬ್ರಿಟನ್​ ಸರ್ಕಾರ) ಹೇಳಿತ್ತು. ಅದೂ ಕೂಡ ಭಾರತದ ಕೋವಿಶೀಲ್ಡ್​ ಲಸಿಕೆ ಬಗ್ಗೆ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ನಂತರ ಕೊವಿನ್​ (CoWIN) ಮೂಲಕ ಪಡೆಯುವ ಸರ್ಟಿಫಿಕೇಟ್​​ ಬಗ್ಗೆ ನಮಗೆ ಸಮಾಧಾನವಿಲ್ಲ ಎಂದು ಯುಕೆ ಹೇಳಿತ್ತು. ಹಾಗೇ, ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳು ಕೊರೊನಾ ಲಸಿಕೆ ಹಾಕಿದ್ದರೂ, ಬ್ರಿಟನ್​ಗೆ ಹೋದರೆ ಅಲ್ಲಿ 10 ದಿನಗಳ ಕಾಲ ಕ್ವಾರಂಟೈನ್​​ನಲ್ಲಿಯೇ ಇರಬೇಕು ಎಂದಿತ್ತು.  ಭಾರತದ ಪ್ರಯಾಣಿಕರು ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡು, ಸರ್ಟಿಫಿಕೆಟ್​ ತೆಗೆದುಕೊಂಡು ಹೋಗಿದ್ದರೂ, ಅದನ್ನು ಮಾನ್ಯ ಮಾಡದೆ, ಅವರನ್ನು ಲಸಿಕೆ ಹಾಕದವರಂತೆ ನಡೆಸಿಕೊಳ್ಳಲಾಗುತ್ತಿತ್ತು.

 

News First Live Kannada

Leave a comment

Your email address will not be published. Required fields are marked *