ಭಾರತದ ರಾಜಕಾರಣಿಗಳು, ಉದ್ಯಮಿಗಳ ಮೇಲೆ ದಾವೂದ್ ಕಣ್ಣು -ಸ್ಫೋಟಕ ಮಾಹಿತಿ ನೀಡಿದ NIA


ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಭಾರತದ ರಾಜಕೀಯ ನಾಯಕರು, ಖ್ಯಾತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ವಿಶೇಷ ಗುಂಪೊಂದನ್ನು ರಚಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

ತನಿಖಾ ಸಂಸ್ಥೆ ನೀಡಿರುವ ವರದಿ ಪ್ರಕಾರ.. ರಾಜಕೀಯ ನಾಯಕರು ಮತ್ತು ಖ್ಯಾತ ಉದ್ಯಮಿಗಳ ಹೆಸರುಗಳು ದಾವೂದ್ ಹಿಟ್ ಲಿಸ್ಟ್‌ನಲ್ಲಿದೆ. ದಾವೂದ್ ಇಬ್ರಾಹಿಂ ತನ್ನ ವಿಶೇಷ ಗುಂಪಿನ ಜೊತೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಹೊಂಚು ರೂಪಿಸುತ್ತಿದ್ದಾನೆ. ಮಾತ್ರವಲ್ಲ ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳನ್ನು ಬಳಸಿ ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದಾನೆ ಅನ್ನೋದು ಎನ್​ಐಎ ದಾಖಲಿಸಿದ ಎಫ್​ಐಆರ್​ನಲ್ಲಿ ಬಹಿರಂಗಗೊಂಡಿದೆ.

ದಾವೂದ್ ಇಬ್ರಾಹಿಂ ದೆಹಲಿ ಮತ್ತು ಮುಂಬೈ ಮೇಲೆ ಹೆಚ್ಚು ಗಮನ ಹರಿಸಿದ್ದಾನೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published. Required fields are marked *