ಭಾರತದ ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್​ ನಿಧನ, ಪ್ರಧಾನಿ ಮೋದಿ ಸಂತಾಪ

ಭಾರತದ ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್​ ನಿಧನ, ಪ್ರಧಾನಿ ಮೋದಿ ಸಂತಾಪ

ಭಾರತದ ಲೆಜೆಂಡರಿ ಕ್ರೀಡಾಪಟು, ಸ್ಪ್ರಿಂಟರ್​​ ಮಿಲ್ಖಾ ಸಿಂಗ್ ವಿಧಿವಶರಾಗಿದ್ದಾರೆ. ಪತ್ನಿ ನಿರ್ಮಲ್ ಅವರು ಮೃತರಾದ 5 ದಿನಗಳಲ್ಲೇ ಮಿಲ್ಖಾ ಸಿಂಗ್ ಕೂಡ ನಿಧನರಾಗಿದ್ದಾರೆ.

ಮಿಲ್ಖಾ ಸಿಂಗ್ ಅವರಿಗೆ ಮೇ 19ರಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ರೋಗಲಕ್ಷಣವಿಲ್ಲದ ಕಾರಣ ಅವರು ಮನೆಯಲ್ಲೇ ಕ್ವಾರಂಟೀನ್​​​​ನಲ್ಲಿದ್ದರು. ನಂತರ ಮೇ 24ರಂದು ಕೋವಿಡ್​ ನ್ಯೂಮೋನಿಯಾದ ಕಾರಣ ಮೊಹಾಲಿಯ ಫೋರ್ಟಿಸ್​ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿತ್ತು. ಬಳಿಕ ಕೊರನೋತ್ತರ ಅನಾರೋಗ್ಯದ ಹಿನ್ನೆಲೆ ಜೂನ್​ 3ರಂದು ಚಂಢೀಘಡದ ಪೋಸ್ಟ್​ ಗ್ರಾಜುಯೇಟ್​​ ಇನ್ಸ್​​ಟಿಟ್ಯೂಟ್​ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್​ ರಿಸರ್ಚ್​​ಗೆ ಶಿಫ್ಟ್​ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 91 ವರ್ಷದ ಮಿಲ್ಖಾ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ಸಿಂಗ್ ಅವರ ಪತ್ನಿ ನಿರ್ಮಲ್ ಕೂಡ 5 ದಿನಗಳ ಹಿಂದೆ ಕೊರನೋತ್ತರ ಅನಾರೋಗ್ಯದಿಂದಾಗಿ ಮೃತರಾಗಿದ್ದರು.

ಮಿಲ್ಖಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

 

The post ಭಾರತದ ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್​ ನಿಧನ, ಪ್ರಧಾನಿ ಮೋದಿ ಸಂತಾಪ appeared first on News First Kannada.

Source: newsfirstlive.com

Source link