ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್​​ ತಂಡ ಪ್ರಕಟ.. ಯಾರಿಗೆ ಸ್ಥಾನ..?


ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​ ಅವರು, ಟೀಮ್​ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಲಿಮಿಟೆಡ್​ ಓವರ್​​ಗಳ ನಾಯಕ ರೋಹಿತ್​ ಶರ್ಮಾ ಅವರನ್ನು ಕೈ ಬಿಟ್ಟಿದ್ದಾರೆ. ಸಾರ್ವಕಾಲಿಕ 11 ಆಟಗಾರರ ತಂಡದಲ್ಲಿ ವೆಂಕಟೇಶ್​ ಪ್ರಸಾದ್​​, ಆರಂಭಿಕರ ಸ್ಥಾನಕ್ಕೆ ಸಚಿನ್​ ತೆಂಡೂಲ್ಕರ್​ ಮತ್ತು ವಿರೇಂದ್ರ ಸೆಹ್ವಾಗ್​ರನ್ನ ಆಯ್ಕೆ ಮಾಡಿದ್ದಾರೆ.

ಇನ್ನು ಮೂರನೇ ಸ್ಥಾನಕ್ಕೆ ವಿರಾಟ್​​ ಕೊಹ್ಲಿ, 4ನೇ ಕ್ರಮಾಂಕದ ಬ್ಯಾಟಿಂಗ್​​ಗೆ ಮೊಹಮ್ಮದ್​ ಅಜರುದ್ಧೀನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಆಲ್​ರೌಂಡರ್​ಗಳ ಸ್ಥಾನಕ್ಕೆ ಯುವರಾಜ್​ ಸಿಂಗ್​ ಮತ್ತು ಕಪಿಲ್​ ದೇವ್​​ ಅವರಿಗೆ ಚಾನ್ಸ್​ ನೀಡಿದ್ದಾರೆ.

ವಿಕೆಟ್​​​ ಕೀಪರ್​ ಜವಾಬ್ದಾರಿಯನ್ನು ಧೋನಿಗೆ ನೀಡಿದ್ದು, ಇನ್ನು ಬೌಲಿಂಗ್​​ ವಿಭಾಗದಲ್ಲಿ ತಮ್ಮ ಹೆಸರನ್ನೇ ಕೈ ಬಿಟ್ಟಿದ್ದಾರೆ. ಕನ್ನಡಿಗ, ಜಾವಗಲ್​ ಶ್ರೀನಾಥ್, ಹರ್ಭಜನ್​​ ಸಿಂಗ್​​​ ಮತ್ತು ಜಹೀರ್​ ಖಾನ್​ ಮತ್ತು ಅನಿಲ್​​ ಕುಂಬ್ಳೆ ಅವರನ್ನು ಬೌಲಿಂಗ್​ ವಿಭಾಗದಲ್ಲಿ ಸೆಲೆಕ್ಟ್​ ಮಾಡಿದ್ದಾರೆ. ಆದ್ರೆ ರಾಹುಲ್​ ದ್ರಾವಿಡ್​​​ ಮತ್ತು ರೋಹಿತ್​ ಶರ್ಮಾ ಹೆಸರನ್ನೇ ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

News First Live Kannada


Leave a Reply

Your email address will not be published.