ಭವಿಷ್ಯದ ಟೀಮ್ ಇಂಡಿಯಾ ಕಟ್ಟೋ ಸಮಯದ ಜೊತೆಗೆ, ಅನುಭವಿಗಳನ್ನ ಕಿತ್ತೆಸೆಯೋ ಸಮಯ ಬಂದಿದೆಯಾ..? ಇಂಥದ್ದೊಂದು ಪ್ರಶ್ನೆಯನ್ನ ಮಾಜಿ ಕ್ಯಾಪ್ಟನ್ ಕಪಿಲ್ದೇವ್ ಹೇಳಿಕೆ ಹುಟ್ಟುಹಾಕಿದೆ. ಇದಕ್ಕೆಲ್ಲಾ ಕಾರಣ ಟಿ20 ವಿಶ್ವಕಪ್ ಟೂರ್ನಿಯ ಪ್ರದರ್ಶನ. ಅದ್ಯಾಕೆ..?
ಟಿ20 ವಿಶ್ವಕಪ್ ಕಿರೀಟ. ಇದು ಸದ್ಯ ಫೇವರಿಟ್ ಟೀಮ್ ಇಂಡಿಯಾಕ್ಕೆ ಕೈಗಟುಕದ್ದಾಗಿದೆ. ಬ್ಯಾಕ್ ಟು ಬ್ಯಾಕ್ ಎರಡು ಸೋಲುಗಳ ನಂತ್ರ, ಗೆಲುವಿನ ಹಳಿಗೆ ಬಂದರೂ ಸೆಮೀಸ್ ಕನಸು ನನಸಾಗೋದು ಕಷ್ಟ ಸಾಧ್ಯ. ಪವಾಡ ನಡೆಯದ ಹೊರೆತು, ಟೀಮ್ ಇಂಡಿಯಾ ಕೈಯಲ್ಲಿ ಏನಿಲ್ಲ. ಇಂಥಹ ಪರಿಸ್ಥಿಗೆ ಹಲವು ಬಗೆಯ ಚರ್ಚೆಗಳೂ ನಡೆಯುತ್ತಿವೆ. ಒಬ್ಬಬ್ಬರೂ ಒಂದೊಂದು ಹೇಳಿಕೆಗಳ ಮೂಲಕ ಟೀಮ್ ಇಂಡಿಯಾದ ಹುಳುಕನ್ನ ಎತ್ತಿಹಿಡಿಯುತ್ತಿದ್ದಾರೆ. ಆದ್ರೆ ಟೀಮ್ ಇಂಡಿಯಾದ ವೈಫಲ್ಯಕ್ಕೆ ಕಾರಣ.. ಅನುಭವಿ ಆಟಗಾರರೇ ಆಗಿದ್ದಾರೆ.
ಹೌದು..! ಟೀಮ್ ಇಂಡಿಯಾ ಪಾಕ್ & ನ್ಯೂಜಿಲೆಂಡ್ ಎದುರಿನ ಸೋಲಿಗೆ, ಅನುಭವಿಗಳೇ ಕಾರಣರಾಗಿದ್ದಾರೆ. ಅನುಭವಿಗಳ ವೈಫಲ್ಯವೇ, ಇಂದು ಬೇರೊಂದು ತಂಡ ಟೀಮ್ ಇಂಡಿಯಾದ ಭವಿಷ್ಯ ಬರೆಯುವಂತಾಗಿದೆ. ಈ ಬೆನ್ನಲ್ಲೇ ಮಾಜಿ ನಾಯಕ ಕಪಿಲ್ ದೇವ್, ಸ್ಟಾರ್ ಆಟಗಾರರ ಭವಿಷ್ಯ ನಿರ್ಧರಿಸಿ ಎಂದು ತಾಕೀತು ಮಾಡಿದ್ದಾರೆ.
ಸ್ಟಾರ್ ಆಟಗಾರರ ಭವಿಷ್ಯ ನಿರ್ಧರಿಸಿ..!
‘ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವಕರಿಗೆ ಚಾನ್ಸ್ ನೀಡಬಹುದಾ ಎಂದು ಬಿಸಿಸಿಐ ಯೋಚಿಸಬೇಕಿದೆ. ಹೇಗೆ ಮುಂದಿನ ತಲೆಮಾರಿನ ಕ್ರಿಕೆಟಿಗರನ್ನ ಬೆಳಸಬೇಕು..? ಯಂಗ್ಸ್ಟರ್ಸ್ ವಿಫಲರಾದರೆ ತೊಂದರೆ ಇಲ್ಲ, ಯಾಕಂದ್ರೆ ಯುವ ಆಟಗಾರರಿಗೆ ಅನುಭವವಾಗುತ್ತೆ. ಆದ್ರೆ ಸ್ಟಾರ್ ಆಟಗಾರರು ಆಡದಿದ್ದರೆ, ಟೀಕೆಗಳನ್ನ ಎದುರಿಸಬೇಕಾಗುತ್ತೆ. ಹೀಗಾಗಿ ಬಿಸಿಸಿಐ ಹೆಚ್ಚು ಯುವ ಆಟಗಾರರಿಗೆ ಅವಕಾಶ ನೀಡುವ ಬಗ್ಗೆ ಚಿಂತಿಸಬೇಕು.’
-ಕಪಿಲ್ದೇವ್, ಮಾಜಿ ನಾಯಕ
ಭಾರತ ತಂಡದ ಮಾಜಿ ನಾಯಕ ಕಪಿಲ್ದೇವ್ ಹೇಳಿರುವ ಈ ಮಾತು, ಅಕ್ಷರಶಃ ಸತ್ಯವಾಗಿದೆ. ಸೆಲೆಕ್ಷನ್ ಕಮಿಟಿ ಯಂಗ್ ಟ್ಯಾಲೆಂಟ್ ಪ್ಲೇಯರ್ಗಳಿಗೆ ಮಣೆಹಾಕೋಕೆ, ಇದೇ ಬೆಸ್ಟ್ ಟೈಮ್ ಕೂಡ.. ಯಾಕಂದ್ರೆ ಸದ್ಯ ವಿಶ್ವಕಪ್ ತಂಡದಲ್ಲಿನ ಬಹುತೇಕ ಅನುಭವಿಗಳು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹಾರ್ದಿಕ್ ಪಾಂಡ್ಯ, ಭುವನೇಶ್ವರ್, ಮಹಮ್ಮದ್ ಶಮಿಗೆ ಅಸ್ಥಿರತೆ ಜೊತೆಗೆ ಇಂಜುರಿ ಇನ್ನಿತರೆ ಸಮಸ್ಯೆಗಳಿದ್ದರೂ, ಸ್ಟಾರ್ ಆಟಗಾರರು ಎಂಬ ಹಣೆಪಟ್ಟಿಯಿಂದ ತಂಡದಲ್ಲಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಇದು ತಂಡದ ಫಲಿತಾಂಶದ ಮೇಲೆ ವ್ಯಕಿರಿಕ್ತ ಪರಿಣಾಮವನ್ನೇ ಬೀರುತ್ತಿದೆ.
ಭವಿಷ್ಯದ ತಂಡಕ್ಕಾಗಿ ಯುವಕರಿಗೆ ಚಾನ್ಸ್ ನೀಡಬೇಕಿದೆ .!
ಯೆಸ್..! ಸದ್ಯ ಕೋಚ್ ಆ್ಯಂಡ್ ಕ್ಯಾಪ್ಟನ್ ಬದಲಾವಣೆಗೆ ಮುಂದಾಗಿರುವ ಬಿಸಿಸಿಐ, ಯಂಗ್ ಇಂಡಿಯಾ ಕಟ್ಟಬೇಕಿದೆ. ಯಾಕಂದ್ರೆ ಈಗಾಗಲೇ ತಂಡದಲ್ಲಿರುವ ಹಲವು ಅನುಭವಿಗಳಿದ್ದಾರೆ. 2022ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್, 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆಗೆ, ಈ ಅನುಭವಿಗಳು ಎಷ್ಟರ ಮಟ್ಟಿಗೆ ಫಿಟ್ ಇರ್ತಾರೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಐಪಿಎಲ್ನಲ್ಲಿ ಕನ್ಸಿಸ್ಟೆನ್ಸ್ ಪರ್ಫಾಮೆನ್ಸ್ ನೀಡಿದ್ದ ಯುವ ಪ್ರತಿಭಾನ್ವಿತರಿಗೆ, ಚಾನ್ಸ್ ನೀಡೋದರ ಜೊತೆಗೆ ಬೆಳವಣಿಗೆಗೆ ಅವಕಾಶ ನೀಡೋದು ಅತ್ಯವಶ್ಯಕವೇ ಆಗಿದೆ.