ನವದೆಹಲಿ: ಡಿಜಿಟಲ್​ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ.

ಆದರೆ ಫೇಸ್ಬುಕ್, ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್​ ಈವರೆಗೂ ತಮ್ಮ ನಿಯಮಾವಳಿಗಳನ್ನ ಅಳವಡಿಸಿಕೊಂಡಿಲ್ಲ. ಸದ್ಯ ಇಂದಿನಿಂದ ಇವುಗಳು ಬಂದ್ ಆಗುತ್ತವೆ ಅಂತಾ ಹೇಳಲಾಗ್ತಿದ್ದು ಈ ಬೆನ್ನಲ್ಲೇ ಗೂಗಲ್ ಮತ್ತು ಯೂಟ್ಯೂಬ್ ಭಾರತದ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸುವ ಗುರಿ ಹೊಂದಿದ್ದೇವೆ ಅಂತಾ ಮಾಹಿತಿ ನೀಡಿವೆ.

ನಾವು ಭಾರತದ ನಿಯಮಾವಳಿಗಳನ್ನ ಗೌರವಿಸುತ್ತೇವೆ ಮತ್ತು ಕಾನೂನಿಗೆ ಬಾಹಿರ ಹಾಗೂ ಕೆಲ ವಿಷಯಗಳನ್ನ ತೆಗೆದುಹಾಕುವ ಸರ್ಕಾರದ ನೀತಿಗಳಿಗೆ ಸ್ಪಂದಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದೇವೆ ಎಂದು ಗೂಗಲ್ ಹಾಗೂ ಯೂಟ್ಯೂಬ್ ತಿಳಿಸಿವೆ.

The post ಭಾರತದ ಹೊಸ ಡಿಜಿಟಲ್ ನಿಯಮಗಳಿಗೆ ಕೊನೆಗೂ ತಲೆಬಾಗಿದ ಗೂಗಲ್​, ಯೂಟ್ಯೂಬ್ appeared first on News First Kannada.

Source: newsfirstlive.com

Source link