ಕಲಬುರಗಿ: ತಾಲ್ಲೂಕಿನ ಪಾಣೆಗಾಂವ್ ಗ್ರಾಮದ ಸಂಜೀವ್ ರಾಠೋಡ್ ಎಂಬ ಸೈನಿಕ, ತನ್ನ ತಾಯಿಗೆ ಆಕ್ಸಿಜನ್ ಸೀಗದಕ್ಕೆ ದೇಶ ರಕ್ಷಕ ಕಣ್ಣೀರು ಹಾಕಿದ್ದಾನೆ. ಕಳೆದ 15 ವರ್ಷಗಳಿಂದ ಕಾಶ್ಮೀರದಲ್ಲಿ ದೇಶದ ಗಡಿ ಕಾಯುತ್ತಿರುವ ಸಿಆರ್​ಪಿಎಫ್​ ಸೈನಿಕ ಸಂಜೀವ್ ರಾಠೋಡ್​ ದಯವಿಟ್ಟು ಆಕ್ಸಿಜನ್ ಕೊಡಿಸಿ ಅಂತ ರಾಜಕಾರಣಿ, ಉದ್ಯಮಿಗಳು ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡುತ್ತ ಕಣ್ಣೀರು ಹಾಕಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಸಂಜೀವ್ ತಾಯಿಗೆ ಕೊರೊನಾ ಸೋಂಕು ಧೃಢಪಟ್ಟಿತ್ತು. ಪಾಣೆಗಾಂವ್ ಮನೆಯಲ್ಲಿಯೇ ಅವ್ರನ್ನ ಹೋಂ ಐಸೋಲೇಷನ್​ನಲ್ಲಿ ಇಡಲಾಗಿತ್ತು. ಆದ್ರೆ, ಸ್ಯಾಚುರೇಷನ್ ಕಡಿಮೆಯಾಗಿ ಉಸಿರಾಟದ ಸಮಸ್ಯೆಯನ್ನ ಈಗ ಅವರ ತಾಯಿ ಅನುಭವಿಸ್ತಾಯಿದ್ದಾರಂತೆ. ಹೀಗಾಗಿ, ಅಸಹಾಯಕತೆಯಿಂದ ಕಾಶ್ಮೀರದಿಂದಲೇ ಆಕ್ಸಿಜನ್​ಗಾಗಿ ಮನವಿ ಮಾಡುತ್ತ ಫೇಸ್ ಬುಕ್​ನಲ್ಲಿ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ ಸೈನಿಕ ರಾಠೋಡ್.

The post ಭಾರತಾಂಬೆ ಕಾಯೋ ಯೋಧನ ತಾಯಿಗೂ ಸಿಗ್ತಿಲ್ಲ ಆಕ್ಸಿಜೆನ್; ಸಹಾಯಕ್ಕಾಗಿ ಅಂಗಲಾಚಿದ ಸೈನಿಕ appeared first on News First Kannada.

Source: newsfirstlive.com

Source link