ಸ್ವಿಸ್​​ ಬ್ಯಾಂಕ್​​​ಗಳಲ್ಲಿ ಭಾರತ ಮೂಲದ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಭಾರತೀಯ ವ್ಯಕ್ತಿಗಳು ಇರಿಸಿರುವ ಹಣದ ಮೊತ್ತವು 2020 ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ (ಅಂದಾಜು 20,700 ಕೋಟಿ ರೂಪಾಯಿ) ಗಿಂತ ಹೆಚ್ಚಾಗಿದೆ. ಆದರೆ ನೇರವಾಗಿ ಹಣದ ರೂಪದಲ್ಲಿ ಇಟ್ಟಿರುವ ಮೊತ್ತ ಕಡಿಮೆಯಾಗಿದೆ.

2019ರ ಅಂತ್ಯದ ವೇಳೆಗೆ 899 ಮಿಲಿಯನ್ ಸ್ವಿಸ್ ಫ್ರಾಂಕ್‌ (6,625 ಕೋಟಿ ರೂ.) ಗಳಿಷ್ಟ ಮೊತ್ತವೂ 2020ರ ಅಂತ್ಯದ ವೇಳೆಗೆ 20,700 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಕಳೆದ ಎರಡು ವರ್ಷಗಳಿಂದ ಕಡಿಮೆಯಾಗಿದ್ದ ಮೊತ್ತದ ಪ್ರಮಾಣ 2020ರಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, 13 ವರ್ಷಗಳಲ್ಲಿ ಈ ಬಾರಿ ಅತೀ ಹೆಚ್ಚು ಹಣ ಇರಿಸಿದ್ದಾರೆ ಎಂದು ಸ್ವಿಸ್​​ ನ್ಯಾಷನಲ್​ ಬ್ಯಾಂಕ್ ಮಾಹಿತಿ ನೀಡಿದೆ.

2006ರಲ್ಲಿ ಗರಿಷ್ಠ ಎಂದರೇ, 6.5 ಬಿಲಿಯನ್ ಸ್ವಿಸ್ ಫ್ರಾಂಕ್‌ ಅತಿ ಹೆಚ್ಚಿನ ಮೊತ್ತವಾಗಿದ್ದು, ಆದರೆ 2011, 2013 ಮತ್ತು 2017ರಲ್ಲಿ ಈ ಮೊತ್ತದ ಪ್ರಮಾಣ ಇಳಿಕೆಯಾಗಿತ್ತು. ಆದರೆ ಸದ್ಯ ಬ್ಯಾಂಕ್​​​ನಲ್ಲಿ ಇರಿಸಿರುವ ಮೊತ್ತದ ಪ್ರಮಾಣ ಹೆಚ್ಚಳವಾಗುವುದಕ್ಕೂ ಭಾರತದಲ್ಲಿ ಚರ್ಚೆಯಾಗುತ್ತಿರುವ ಕಪ್ಪು ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

The post ಭಾರತೀಯರ ಸ್ವಿಸ್​ ​​ಬ್ಯಾಂಕ್​​ನಲ್ಲಿರೋ ಹಣ ₹20,700 ಕೋಟಿ ಹೆಚ್ಚಳ; ಏನಿದರ ಮರ್ಮ? appeared first on News First Kannada.

Source: newsfirstlive.com

Source link