ಇಂದು ಟ್ವಿಟರ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಹುದ್ದೆಗೆ ಜಾಕ್ ಡೋರ್ಸೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಟ್ವಿಟರ್ ಹೊಸ ಸಿಇಒ ಆಗಿ ಭಾರತದ ಪರಾಗ್ ಅಗರವಾಲ್ ನೇಮಕ ಆಗಿದ್ದಾರೆ.
ಯಾರು ಈ ಪರಾಗ್ ಅಗರವಾಲ್?
ಭಾರತ ಮೂಲದ ಪರಾಗ್ ಅಗರವಾಲ್ ಮುಂಬೈನ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದರು. 2021 ನವೆಂಬರ್ ಅಂದರೆ ಈ ತಿಂಗಳ ಮೊದಲ ವಾರದಲ್ಲೇ ಸಂಸ್ಥೆ ಪರಾಗ್ ಅವರನ್ನು ಟ್ವಿಟರ್ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸಿದ್ದರು. ಈಗ ಇವರನ್ನೇ ನೂತನ ಸಿಇಒ ಆಗಿ ಆಯ್ಕೆ ಮಾಡಲಾಗಿದೆ.
ಪರಾಗ್ ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಪರಿಣಿತರು. ಹತ್ತಾರು ವರ್ಷಗಳಿಂದ ಟ್ವಿಟರ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ಟ್ವಿಟರ್ ಸಂಸ್ಥೆಗೆ ಜಾಯಿನ್ ಆಗಿದ್ದರು. ಹಲವು ಪೊಸಿಷನ್ಗಳಲ್ಲಿ ಕೆಲಸ ಮಾಡಿದ ಇವರಿಗೆ ಈಗ ಸಿಇಒ ಸ್ಥಾನ ಒಲಿದು ಬಂದಿದೆ.