ಭಾರತ್ ಜೋಡೋಗೆ ಬೈ..ಬೈ ಹೇಳಿ ಹೋದ ಕಾಂಗ್ರೆಸ್ ಅಧಿನಾಯಕಿ: ಅರ್ಧ ದಿನದ ಯಾತ್ರೆಯಲ್ಲಿ ಸೋನಿಯಾ ಮೇನಿಯಾ ಹೇಗಿತ್ತು ನೋಡಿ | Here Is Sonia Gandhi’s half day In Congress Bharat Jodo Yatra


ಭಾರತ್ ಜೋಡೋಗೆ ಬೈ..ಬೈ ಹೇಳಿ ಹೋದ ಕಾಂಗ್ರೆಸ್ ಅಧಿನಾಯಕಿ ದೆಹಲಿಗೆ ವಾಪಸ್ ಆಗಿದ್ದಾರೆ. ಇನ್ನು ಅರ್ಧ ದಿನದ ಯಾತ್ರೆಯಲ್ಲಿ ಸೋನಿಯಾ ಮೇನಿಯಾ ಹೇಗಿತ್ತು ನೋಡಿ

ಮೈಸೂರು: ವದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ (Bharat Jodo Yatra)ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಇದೀಗ ಕರ್ನಾಟಕದಲ್ಲೂ ಮುಂದುವರಿಸಿದ್ದಾರೆ. ಇದಕ್ಕೆ  ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಥ್ ನೀಡಿ, ಇದೀಗ ದೆಹಲಿಗೆ ವಾಪಸ್ ಆಗಿದ್ದಾರೆ.

ಹೌದು….ಪುತ್ರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು(ಅ.06) ಸೋನಿಯಾ ಗಾಂಧಿ ಭಾಗವಹಿಸಿದ್ರು. ನಾಯಕರು, ಕಾರ್ಯಕರ್ತರ ನಡುವೆ ಅರ್ಧ ದಿನ ಹೆಜ್ಜೆ ಹಾಕಿ ವಾಪಸ್ ದೆಹಲಿಗೆ ಮರಳಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಾಡಿಯಾ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಗೆ ಬೈ ಹೇಳಿದ ಸೋನಿಯಾ ಗಾಂಧಿ, ರಸ್ತೆ ಮಾರ್ಗವಾಗಿ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ತೆರೆಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಇನ್ನು ಪುತ್ರನ ಯಾತ್ರೆಯಲ್ಲಿ ಭಾಗವಹಿಸಿ ಮತ್ತಷ್ಟು ಬಲ ನೀಡಿದ ಸೋನಿಯಾ ಅವರ ಅರ್ಧ ದಿನ ಯಾತ್ರೆ ಹೇಗಿತ್ತುಎನ್ನುವುದು ಈ ಕೆಳಗಿನಂತಿದೆ ನೋಡಿ.

TV9 Kannada


Leave a Reply

Your email address will not be published.