ನವದೆಹಲಿ: ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸುತ್ತಿರುವ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬೆಲೆಯನ್ನು ಕಡಿಮೆ ಮಾಡಿದ್ದು, ಈ ಹಿಂದೆ ರಾಜ್ಯಗಳಿಗೆ ನಿಗದಿ ಪಡಿಸಿದ್ದ 600 ರೂಪಾಯಿ ಬದಲಾಗಿ 400 ರೂಪಾಯಿಗಳಿಗೆ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಭಾರತ್​ ಬಯೋಟೆಕ್ ಮತ್ತೆ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗಳಿಗೆ ಕೊರೊನಾ ಲಸಿಕೆಯ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ವ್ಯಾಕ್ಸಿನ್ ಲಸಿಕೆಯ ಬೆಲೆಯನ್ನು 400 ರೂಪಾಯಿಯಿಂದ 300 ರೂಪಾಯಿಗೆ ಇಳಿಕೆ ಮಾಡಿತ್ತು. ಸದ್ಯ ಭಾರತ್​ ಬಯೋಟೆಕ್​​ ಕೂಡ ಲಸಿಕೆಯ ಬೆಲೆಯನ್ನು 600 ರೂಪಾಯಿಗಳಿಂದ 400 ರೂಪಾಯಿಗಳಿಗೆ ಕಡಿತ ಮಾಡಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗೆ 1,200 ರೂಪಾಯಿ ದರದಲ್ಲಿ ಪೂರೈಕೆ ಮಾಡುವುದಾಗಿ ಹೇಳಿದೆ.

ಕೇಂದ್ರ ಸರ್ಕಾರ ನೀತಿಯಂತೆ ಸಂಸ್ಥೆ ಉತ್ಪಾದಿಸುವ ಲಸಿಕೆಯ ಡೋಸ್​​ಗಳ ಪ್ರಮಾಣದಲ್ಲಿ ಶೇ. 50ರಷ್ಟು ಲಸಿಕೆಗಳನ್ನು 150 ರೂಪಾಯಿಯಂತೆ ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡಲಿದೆ. ಇನ್ನುಳಿದ ಲಸಿಕೆಗಳಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ವಿದೇಶಗಳಿಗೆ ಪೂರೈಕೆ ಆಗಲಿದೆ. ಇನ್ನು ಪ್ರತಿ ಡೋಸ್​ ವಿದೇಶಿ ರಫ್ತಿಗೆ 15 ರಿಂದ 20 ಡಾಲರ್​ ದರವನ್ನು ಭಾರತ್ ಬಯೋಟೆಕ್ ನಿಗದಿ ಮಾಡಿತ್ತು.

 

The post ಭಾರತ್ ಬಯೋಟೆಕ್​ ಈ ನಿರ್ಧಾರದಿಂದ ರಾಜ್ಯ ಸರ್ಕಾರಗಳಿಗೆ ಎಷ್ಟು ದುಡ್ಡು ಉಳಿಯುತ್ತೆ ಗೊತ್ತಾ..? ನಿಮಗೂ ರಿಲೀಫ್ appeared first on News First Kannada.

Source: newsfirstlive.com

Source link