ನವದೆಹಲಿ: ಅಮೆರಿಕಾ ನೌಕಾ ಪಡೆ ಭಾರತದ ನೌಕಾ ದಳಕ್ಕೆ ಮೊದಲ ಬಾರಿಗೆ ಸೈಕೋರ್ಸ್ಕ್ಯ್ ಎಂಹೆಚ್​​-60ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ಸ್​​​ಗಳನ್ನು ಶುಕ್ರವಾರ ಹಸ್ತಾಂತರ ಮಾಡಿದೆ.

ನಾರ್ಥ್​ ಐರ್ಲ್ಯಾಂಡ್​​ನ ನಾವಲ್​​ ಏರ್​ ಸ್ಟೇಷನ್​​ನಲ್ಲಿ ಹೆಲಿಕಾಪ್ಟರ್​​ಗಳನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಮೊದಲ ಹಂತರದಲ್ಲಿ ಎರಡು ಮಲ್ಟಿ ರೋಲ್ ಹೆಲಿಕಾಪ್ಟರ್ಸ್​​​ಗಳನ್ನು ಭಾರತದ ನೌಕ ದಳಕ್ಕೆ ಹಸ್ತಾಂತರ ಮಾಡಿರೋದು ಭಾರತ ಹಾಗೂ ಅಮೆರಿಕಾ ನಡುವೆ ರಕ್ಷಣಾ ಒಪ್ಪಂದ ಮತ್ತು ಸ್ನೇಹದಲ್ಲಿ ಹೊಸ ಶಕೆಯನ್ನು ಆರಂಭ ಎಂದೇ ಕರೆಯಲಾಗಿದೆ.

ಹೆಲಿಕಾಪ್ಟರ್​ ಹಸ್ತಾಂತರ ಕಾರ್ಯಕ್ರಮದಲ್ಲಿ ಯುಸ್​​​ ನೌಕದಳದ ಕಮಾಂಡರ್​​ ನಾವಲ್​​ ಏರ್​ ಪೋರ್ಸ್ ನ ವೈಸ್ ಅಡ್ಮಿರಲ್ ಕೆನ್ನೆತ್ ವೈಟ್‌ಸೆಲ್ ಮತ್ತು ಡಿಸಿಎನ್​​ಎಸ್​ ವೈಸ್ ಅಡ್ಮಿರಲ್ ರಾವ್ನೀತ್ ಸಿಂಗ್ ಅವರು ಭಾಗಿಯಾಗಿದ್ದರು. ಕಳೆದ ವರ್ಷ ಮಾಡಿಕೊಳ್ಳಲಾಗಿದ್ದ ವಿದೇಶಿ ರಕ್ಷಣಾ ಒಪ್ಪಂದಗಳ ಅನ್ವಯ ಸುಮಾರು 2.4 ಬಿಲಿಯನ್​ ಡಾಲರ್​​ ಮೊತ್ತದಲ್ಲಿ ಎಂಹೆಚ್​​60 ಆರ್​​​ ಖರೀದಿ ಮಾಡಲಾಗಿದೆ.

ಸೈಕೋರ್ಸ್ಕ್ಯ್ ಎಂಹೆಚ್​​-60ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ಸ್​​​ ಯುದ್ಧ ನೌಕೆ, ಕ್ರೂಸರ್​​​, ಏರ್​​​ಕ್ರಾಫ್ಟ್​ ಕ್ಯಾರಿಯರ್ಸ್​​​ಗಳನ್ನು ಕಾರ್ಯನಿರ್ವಸುವಂತೆ ವಿನ್ಯಾಸಗೊಳಿಸಲಾಗಿದೆ. ಇವು ಜಲಾಂತರ್ಗಾಮಿ ನೌಕೆಗಳನ್ನು ಬೇಟೆಯಾಡುವ ಜೊತೆಗೆ ಯುದ್ಧ ನೌಕೆಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

The post ಭಾರತ-ಅಮೆರಿಕ ‘ರಕ್ಷಣಾ ಸ್ನೇಹ’ದಲ್ಲಿ ಹೊಸ ಶಕೆ.. ಸೇನೆಗೆ ಮಲ್ಟಿ ರೋಲ್ ಹೆಲಿಕಾಪ್ಟರ್ಸ್ ಬಲ appeared first on News First Kannada.

Source: newsfirstlive.com

Source link