ಭಾರತ ಮಹಿಳೆಯರ ಕ್ರಿಕೆಟ್​​ ತಂಡ, ಇಂಗ್ಲೆಂಡ್​ ವಿರುದ್ಧ ಏಕೈಕ ಟೆಸ್ಟ್​ ಪಂದ್ಯವನ್ನ ಇಂದಿನಿಂದ ಕಿಕ್​​ಸ್ಟಾರ್ಟ್​ ಮಾಡ್ತಿದೆ. ಈ ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ಇಂಗ್ಲೆಂಡ್​ ಆತಿಥ್ಯ ವಹಿಸಿದೆ. ಬ್ರಿಸ್ಟೋಲ್​​​​​ ಕೌಂಟಿ ಗ್ರೌಂಡ್​ನಲ್ಲಿ ನಡೆಯಲಿರೋ ಮ್ಯಾಚ್​​ಗೆ, ಉಭಯ ತಂಡಗಳು ಸಜ್ಜಾಗಿವೆ. ಆ ಮೂಲಕ 7 ವರ್ಷ​ ಬಳಿಕ ಟೆಸ್ಟ್​​​​ಗೆ ಮರಳಿದ ಇಂಡಿಯಾ ವುಮೆನ್ಸ್​ ಟೀಮ್,​​ ಟೆಸ್ಟ್​ ಜೆರ್ಸಿ ಧರಿಸೋಕೆ ಸಿದ್ಧಗೊಂಡಿದೆ. ಈಗಾಗಲೇ ಸತತ ಮೂರು ಟೆಸ್ಟ್​​ ಸರಣಿ ಗೆದ್ದಿರುವ ವುಮೆನ್ಸ್​ ಟೀಮ್​​​, 4ನೇ ಸರಣಿ ಗೆಲುವಿನ ಮೇಲೂ ಕಣ್ಣಿಟ್ಟಿದೆ.

ಇಂಗ್ಲೆಂಡ್​ಗೆ ಟಫ್​ ಫೈಟ್​​ ನೀಡೋಕೆ ಸ್ಟ್ರಾಂಗ್ ತಂಡ​ ಕಟ್ಟಿದ ಬಿಸಿಸಿಐ..!
ಒಂದು ಪಂದ್ಯದ ಟೆಸ್ಟ್​​ಗಾಗಿ ಬಿಸಿಸಿಐ 18 ಸದಸ್ಯರ ಬಲಿಷ್ಠ ತಂಡ ಕಟ್ಟಿದೆ. ಮಿಥಾಲಿ ರಾಜ್​ ತಂಡವನ್ನ ಮುನ್ನಡೆಸಲಿದ್ರೆ, ​ವೈಸ್​​​ಕ್ಯಾಪ್ಟನ್​ ಹರ್ಮನ್​​ಪ್ರೀತ್​ ಕೌರ್​. ಲೇಡಿ ಸೂಪರ್​​ ಸ್ಟಾರ್ ಸ್ಮೃತಿ ಮಂದಾನ, ಪೂನಮ್​ ರಾವತ್ ಓಪನಿಂಗ್​​ನಲ್ಲಿ ಅಬ್ಬರಿಸೋಕೆ ಸಿದ್ದಗೊಂಡಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠ ಬ್ಯಾಟಿಂಗ್​ ಬಲವನ್ನೇ ಹೊಂದಿದೆ. ಮಿಥಾಲಿ, ಪ್ರಿಯಾ ಪೂನಿಯಾ, ಜಮೈಮಾ ರೋಡ್ರಿಗ್ಸ್​​​ ಮತ್ತು ಆಲ್​ರೌಂಡರ್​ ದೀಪ್ತಿ ಶರ್ಮಾ, ತಂಡದ ಬಲ ಹೆಚ್ಚಿಸಿದ್ದಾರೆ.

ಇನ್ನು ಬೌಲಿಂಗ್​ ವಿಭಾಗದಲ್ಲಿ ಅನುಭವಿ ಬೌಲರ್​ ಜೂಲನ್​ ಗೋಸ್ವಾಮಿ, ಶಿಖಾ ಪಾಂಡೆ, ರಾಧಾ ಯಾದವ್, ಏಕ್ತಾ ಬಿಷ್ತ್, ಪೂನಮ್​ ಯಾದವ್,​ ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ ಕೂಡ ತಂಡದಲ್ಲಿದ್ದಾರೆ. ಆದರೆ ಯಾರನ್ನ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಆಡಿಸ್ತಾರೆ ಅನ್ನೋದು, ಸದ್ಯದ ಕುತೂಹಲ. 2002ರಲ್ಲಿ ಜಂಟಿಯಾಗಿ ಟೆಸ್ಟ್​ಗೆ ಡೆಬ್ಯೂ ಮಾಡಿದ್ದ ಮಿಥಾಲಿ ಮತ್ತು ಜೂಲನ್, ತಲಾ 10 ಪಂದ್ಯಗಳನ್ನಾಡಿದ್ದಾರೆ. ಸದ್ಯ ಇವರ ಅನುಭವ ತಂಡಕ್ಕೆ ಆಧಾರವಾಗಲಿದೆ. ಇನ್ನು ಇಂಗ್ಲೆಂಡ್​ ಟೀಮ್​ ಸಹ ಬಲಿಷ್ಠವಾಗಿದ್ದು, ಇಂಡಿಯಾ ವುಮೆನ್ಸ್​ಗೆ ಟಫ್​ ಫೈಟ್​ ನೀಡಲಿದೆ.

ಟೆಸ್ಟ್​ ಕ್ರಿಕೆಟ್​​ ಅನುಭವದಲ್ಲಿ ಇಂಗ್ಲೆಂಡ್​ಗೇ ಹೆಚ್ಚು ಲಾಭ..?
ರೆಡ್ ಬಾಲ್​ ಕ್ರಿಕೆಟ್​ನಲ್ಲಿ ಹೆಚ್ಚು ಎಕ್ಸ್​ಪೀರಿಯನ್ಸ್​ ಹೊಂದಿರೋದು ಅಂದ್ರೆ, ಅದು ಇಂಗ್ಲೆಂಡ್​. ಇಂಗ್ಲೆಂಡ್​ ವಿರುದ್ಧ ಕಳೆದೆರೆಡು ಸರಣಿಗಳಲ್ಲಿ ಗೆದ್ದಿದ್ರೂ, ಇಂದಿನ ಟೆಸ್ಟ್​ ಗೆಲ್ಲೋಕೆ ಆಂಗ್ಲರಿಗೇ ಹೆಚ್ಚು ಚಾನ್ಸ್​​ ಇದೆ. ಅನುಭವಿ ಆಟಗಾರರು, ಮಲ್ಟಿ ಟ್ಯಾಲೆಂಟೆಡ್​ ಪ್ಲೇಯರ್ಸ್​, ಈ ಹಿಂದೆ ಆಸಿಸ್ ವಿರುದ್ಧ ಟೆಸ್ಟ್​ ಆಡಿರೋದು ಮತ್ತು ಇಲ್ಲಿನ ಪಿಚ್, ವಾತಾವರಣ..!!! ಹೀಗೆ ಎಲ್ಲಾ ಇಂಗ್ಲೆಂಡ್​ ತಂಡದ ಪರವಾಗಿದೆ.

ಉಭಯ ತಂಡಗಳಲ್ಲಿ ಟೆಸ್ಟ್​ ಅನುಭವ
ಇಂಗ್ಲೆಂಡ್​                         ​     ಭಾರತ
15          ಪ್ಲೇಯರ್ಸ್               18
11        ಟೆಸ್ಟ್​ ಅನುಭವ            08
03       2014ರ ಬಳಿಕ ಟೆಸ್ಟ್​        00

ಹೆಡ್​​​ ಟು ಹೆಡ್​​​ನಲ್ಲಿ ಭಾರತೀಯ ಮಹಿಳೆಯರೇ ಮೇಲುಗೈ..
ವುಮೆನ್ಸ್​ ಟೆಸ್ಟ್​ನಲ್ಲಿ ಭಾರತ-ಇಂಗ್ಲೆಂಡ್​ ಮುಖಾಮುಖಿಯಲ್ಲಿ ಭಾರತವೇ, ಮೇಲುಗೈ ಸಾಧಿಸಿದೆ. ಅದರಲ್ಲೂ ಅವರದ್ದೇ ನೆಲದಲ್ಲಿ ಇಂಗ್ಲೆಂಡ್​​​ಗೆ ಮುಖಭಂಗವಾಗುವಂತ್ತೆ ಮಾಡಿರೋದು, ಮಿಥಾಲಿ ಪಡೆಯ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇಂದಿನ ಪಂದ್ಯಕ್ಕೂ ಇದೇ ಜೋಷ್​​ನಲ್ಲಿ ಭಾರತದ ವನಿತೆಯರು ಕಣಕ್ಕಿಳಿಯುತ್ತಾರೆ.

ಉಭಯ ತಂಡಗಳ ಮುಖಾಮುಖಿ
ಒಟ್ಟು                         13
ಭಾರತ ಗೆಲುವು           02
ಇಂಗ್ಲೆಂಡ್​​ ಗೆಲುವು       01
ಡ್ರಾ                        10

ಟೆಸ್ಟ್​​ ಇತಿಹಾಸದಲ್ಲಿ ಭಾರತ​ ಗೆದ್ದಿರೋ ಸರಣಿಗಳೆಷ್ಟು..?
ಯೆಸ್​​ ಟೆಸ್ಟ್​ ಕ್ರಿಕೆಟ್​​ ಇತಿಹಾಸದಲ್ಲಿ ಇಂಡಿಯಾ ವುಮೆನ್ಸ್​​ ಟೀಮ್​, ಎಷ್ಟಪ್ಪಾ ಗೆದ್ದಿರ್ಬೋದು ಅಂತ ಪ್ರಶ್ನೆ ಕಾಡೋದು ಸಹಜ. ಏಕೆಂದರೆ ಅಲ್ಲೊಂದು ಇಲ್ಲೊಂದು ಟೆಸ್ಟ್​ ಆಡಿರೋದೇ ಅದಕ್ಕೆ ನಿದರ್ಶನ. 1976ರಿಂದಲೇ ಟೆಸ್ಟ್​ ಆಡೋದನ್ನ ಆರಂಭಿಸಿರೋ ಭಾರತದ ಮಹಿಳೆಯರು, ಆಡಿರೋದು ಒಟ್ಟು 19 ಸರಣಿ. ಅದರಲ್ಲಿ 4 ಗೆದ್ದಿದ್ರೆ, 4 ಸರಣಿ ಸೋತಿದೆ. 11 ಪಂದ್ಯಗಳಲ್ಲಿ ಡ್ರಾ ಕಂಡಿದೆ.

ಒಟ್ನಲ್ಲಿ 7 ವರ್ಷಗಳ ಬಳಿಕ ಟೆಸ್ಟ್​​​ ಆಡ್ತಿರೋ ಇಂಡಿಯಾ ವುಮೆನ್ಸ್​, ಅಖಾಡದಲ್ಲಿ ಸೋಲ್ತಾರೋ ಗೆಲ್ತಾರೋ ಅನ್ನೋದನ್ನ ಕಾದುನೋಡಬೇಕಿದೆ..!!

The post ಭಾರತ-ಇಂಗ್ಲೆಂಡ್ ಏಕೈಕ ಟೆಸ್ಟ್: 7 ವರ್ಷಗಳ ಬಳಿಕ ವೈಟ್ ಜೆರ್ಸಿ ತೊಟ್ಟ ಮಿಥಾಲಿ ಪಡೆ appeared first on News First Kannada.

Source: newsfirstlive.com

Source link