ಜೆರುಸಲೇಮ್: ಭಾರತ ಕೊರೊನಾ ಎರಡನೇ ಅಲೆಯ ತೀವ್ರತೆಗೆ ಸಿಲುಕಿ ನಲುಗುತ್ತಿದ್ದು, ಈ ಸಂದರ್ಭದಲ್ಲಿ ಹಲವು ದೇಶಗಳು ನೆರವಿಗೆ ಧಾವಿಸಿವೆ. ಅಗತ್ಯ ವೈದ್ಯಕೀಯ ಉಪಕರಣ, ಔಷಧಿಗಳು, ಆಕ್ಸಿಜನ್​ ಹಾಗೂ ಆಕ್ಸಿಜನ್​​ ಪ್ಲಾಂಟ್​​ಗಳನ್ನು ಭಾರತಕ್ಕೆ ರವಾನಿಸಿವೆ. ಈ ನಡುವೆಯೂ ಭಾರತದ ಪರಮಾಪ್ತ ಗೆಳೆಯ ಇಸ್ರೇಲ್​ ಕೂಡ ಭಾರತದ ನೆರವಿಗೆ ಧಾವಿಸಿದೆ. ಇತ್ತ ಇಸ್ರೇಲ್​​ ಪ್ರಜೆಗಳು ಕೂಡ ಓಂ ನಮಃ ಶಿವಾಯ ಮಂತ್ರ ಪಠಿಸುವ ಮೂಲಕ ಭಾರತ ಕೊರೊನಾ ವಿರುದ್ಧದ ಯುದ್ಧದಲ್ಲಿ ಬಹುಬೇಗ ಗೆಲ್ಲಬೇಕು ಎಂದು ಪ್ರಾರ್ಥಿಸಿದ್ದಾರೆ.

ಇಸ್ರೇಲ್​​ನ ಟೆಲ್ ಅವಿವ್ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದ ಇಸ್ರೇಲ್​ ಪ್ರಜೆಗಳು ಭಾರತ ಬಹುಬೇಗ ಚೇತರಿಸಿಕೊಳ್ಳಲು ಎಂದು ಹಾಡುಗಳನ್ನು ಹಾಡುವ ಮೂಲಕ ಪ್ರಾರ್ಥನೆ ಮಾಡಿದ್ದರು. ಇದೇ ವೇಳೆ ಓಂ ನಮಃ ಶಿವಾಯ ಮಂತ್ರ ಪಠಣೆಯನ್ನು ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಅಂದಹಾಗೇ, ಕಳೆದ ವಾರವಷ್ಟೇ ಇಸ್ರೇಲ್​ ಭಾರತಕ್ಕೆ ಕೊರೊನಾ ವಿರುದ್ಧ ಹೋರಾಟ ಮಾಡಲು ಅಗತ್ಯವಿರುವ ವೈದ್ಯಕೀಯ ಉಪಕರಣ ಸೇರಿದಂತೆ ಔಷಧಿ, ಪಿಪಿಇ ಕಿಟ್​​, ಮಾಸ್ಕ್​ಗಳನ್ನು ಕಳುಹಿಸಿಕೊಟ್ಟಿತ್ತು. ನಿನ್ನೆಯಷ್ಟೇ ಇಸ್ರೇಲ್​ನಿಂದ ಎರಡನೇ ಹಂತದಲ್ಲಿ ಅಗತ್ಯ ವಸ್ತುಗಳು ಭಾರತವನ್ನು ತಲುಪಿಸಿದ್ದವು. ಈ ಕುರಿತಂತೆ ಇಸ್ರೇಲ್​ ರಾಯಭಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

The post ಭಾರತ ಕೊರೊನಾ ಮುಕ್ತವಾಗಲೆಂದು ‘ಓಂ ನಮಃ ಶಿವಾಯ’ ಮಂತ್ರ ಪಠಿಸಿದ ಇಸ್ರೇಲಿಗರು appeared first on News First Kannada.

Source: newsfirstlive.com

Source link