ನವದೆಹಲಿ: ಒಪ್ಪಂದಗಳನ್ನು ಉಲ್ಲಂಘಿಸಿ ಬೀಜಿಂಗ್ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಕೆಟ್ಟ ಹಾದಿಯಲ್ಲಿ ಸಾಗುತ್ತಿದೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಬ್ಲೂಮ್ಬರ್ಗ್ನ ಎಕನಾಮಿಕ್ ಪೋರಂ ಹಮ್ಮಿಕೊಂಡಿದ್ದ ‘ಗ್ರೇಟರ್ ಪವರ್ ಕಾಂಪಿಟೇಶನ್: ದಿ ಎಮರ್ಜಿಂಗ್ ವರ್ಲ್ಡ್ ಆರ್ಡರ್’ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ಹಾಗೂ ಚೀನಾದ ನಡುವಿನ ಹಲವು ಒಪ್ಪಂದಗಳನ್ನ ಚೀನಾ ಉಲ್ಲಂಘಿಸಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:1 ಗಂಟೆ 25 ನಿಮಿಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮಲಾ ಹ್ಯಾರಿಸ್
ಉಭಯ ದೇಶಗಳ ನಡುವಿನ ಸಂಬಧ ಈಗ ಹೇಗಿದೆ, ಅದು ಎತ್ತ ಸಾಗುತ್ತಿದೆ ಎಂದು ಚೀನಾಕ್ಕೆ ಅರಿವಿದೆ. ಈ ಸಂಬಂಧ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬುದು ಅವರಿಗೆ ತಿಳಿದಿದೆ. ಈ ಕುರಿತು ನಾನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇನೆ. ಇದಕ್ಕೆ ಸರಿಯಾದ ವಿವರಣೆಯನ್ನೂ ಡ್ರ್ಯಾಗನ್ ರಾಷ್ಟ್ರ ನೀಡ್ತಿಲ್ಲ. ಇದ್ರಿಂದ ಆ ದೇಶದ ನಾಯಕರು ಬಯಸುತ್ತಿರೋದಾದ್ರೂ ಏನು ಎಂಬುದು ಸ್ಪಷ್ಟವಾಗ್ತಿಲ್ಲ. ಈ ವಿಷಯವಾಗಿ ಚೀನಾದ ನಾಯಕರೇ ಸ್ಪಷ್ಟನೆ ನೀಡಬೇಕು ಅಂತ ಜೈಶಂಕರ್ ತಿಳಿಸಿದ್ರು.
ಇದನ್ನೂ ಓದಿ:ಮೋಸದ ಬುದ್ಧಿ ಬಿಡದ ಚೀನಾ.. ಸದ್ದಿಲ್ಲದೇ ಭಾರತದ ಗಡಿಯಲ್ಲಿ ಗ್ರಾಮಗಳ ನಿರ್ಮಾಣ..!