ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ.. ಅಚ್ಚರಿಯ ಹೇಳಿಕೆ ಕೊಟ್ಟ ಐಸಿಸಿ


ಟಿ-20 ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ, ಪಾಕಿಸ್ತಾನದ ಎದುರು ಹೀನಾಯ ಸೋಲನುಭವಿಸಿತು. ಹೀಗಾಗಿ ಪಾಕಿಸ್ತಾನವನ್ನ ಸೋಲಿಸಲು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಅದಕ್ಕಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಯನ್ನ ಆಯೋಜಿಸಿ ಎಂಬ ಒತ್ತಾಯ ಕೇಳಿ ಬಂದಿದೆ. ಅದರಲ್ಲೂ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ 2012-13ರ ಬಳಿಕ ಜರುಗಿಲ್ಲ. ಈ ನಿರ್ಧಾರ ಸದ್ಯಕ್ಕೆ ಅಸಾಧ್ಯ ಎಂದೇ ಹೇಳಲಾಗ್ತಿದೆ.

ಇನ್ನು ಈ ಬಗ್ಗೆ ಮಾತನಾಡಿರೋ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಎರಡು ದೇಶಗಳ ನಡುವಿನ ನಿರ್ಧಾರಗಳ ಮೇಲೆ ನಿಂತಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಕಡೆಯಿಂದ ಯಾವುದೇ ಒತ್ತಡ ಇರುವುದಿಲ್ಲ. ಏಕೆಂದರೆ ಎರಡೂ ದೇಶಗಳ ನಡುವಿನ ಬಾಂಧವ್ಯ ಹಾಗಿದೆ ಎಂದು ತಿಳಿಸಿದೆ.

ಐಸಿಸಿಯ ಹಂಗಾಮಿ ಸಿಇಒ ಜೆಫ್ ಅಲಾರ್ಡಿಸ್ ಮಾತನಾಡಿದ್ದು, ಭಾರತ- ಪಾಕಿಸ್ತಾನ ಕ್ರಿಕೆಟ್​ ಮಂಡಳಿಗಳು ಒಪ್ಪಿಕೊಂಡರೆ ಮಾತ್ರ ಇದು ಸಾಧ್ಯವಾಗುತ್ತೆ. ಇಲ್ಲವಾದಲ್ಲಿ ದ್ವಿಪಕ್ಷೀಯ ಆಯೋಜನೆ ಅಸಾಧ್ಯ. ಇನ್ನು ನಾವು ಅವರ ಮಧ್ಯೆ ಹಾಕೋದಕ್ಕೆ ಬರುವುದೇ ಇಲ್ಲ ಎಂದು ಜಾರಿಕೊಂಡಿದ್ದಾರೆ.

 

News First Live Kannada


Leave a Reply

Your email address will not be published.