ಸದ್ಯ ಇಂಗ್ಲೆಂಡ್ ಪ್ರವಾಸಕ್ಕಾಗಿ ಸಜ್ಜಾಗುತ್ತಿರುವ ಭಾರತ ಮಹಿಳಾ ಟೆಸ್ಟ್‌ ತಂಡದ ನೂತನ ಜೆರ್ಸಿ ವಿತರಿಸಲಾಗಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್‌ ಪಂದ್ಯವನ್ನ ಆಡಲಿರುವ ಮಿಥಾಲಿ ಪಡೆ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ಮಹಿಳಾ ತಂಡಕ್ಕೆ ನೀಡಲಾಗಿರುವ ಟೆಸ್ಟ್​ ಜರ್ಸಿ, ಪುರುಷರ ತಂಡದ ಟೆಸ್ಟ್‌ ಜೆರ್ಸಿಯನ್ನೇ ಹೋಲುತ್ತಿದೆ. ಮುಂಭಾಗ ಬಿಸಿಸಿಐ, ಎಂಪಿಎಲ್‌ ಹಾಗೂ ಬೈಜೂಸ್‌ ಲೋಗೋವನ್ನ ಹೊಂದಿರುವ ಈ ಜೆರ್ಸಿ, ಹಿಂಭಾಗದಲ್ಲಿ ಹೆಸರು ಹಾಗೂ ಸಂಖ್ಯೆಯನ್ನು ನಮೂದಿಸಲಾಗಿದೆ.

 

The post ಭಾರತ ಮಹಿಳಾ ಟೆಸ್ಟ್ ತಂಡದ ಹೊಸ ಜೆರ್ಸಿ ಅನಾವರಣ appeared first on News First Kannada.

Source: newsfirstlive.com

Source link