ಭಾರತದ ಮಹಿಳಾ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಆಗಿ ರಮೇಶ್​ ಪವಾರ್​​ ಆಯ್ಕೆಯಾದ ಬೆನ್ನಲ್ಲೆ ಬ್ಯಾಟಿಂಗ್​​ ತರಬೇತುದಾರರಾಗಿ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶಿವ ಸುಂದರ್​ ದಾಸ್​ ನೇಮಕಗೊಂಡಿದ್ದರೆ, ಅಭಯ್​ ಶರ್ಮಾ ಬೌಲಿಂಗ್​​ ಕೋಚ್​ ಆಗಿ ಆಯ್ಕೆಯಾಗಿದ್ದಾರೆ. ಶಿವ ಸುಂದರ್ ದಾಸ್​ ಅವರು ಪ್ರಸ್ತುತ ಮಹಿಳಾ ಕ್ರಿಕೆಟ್​ನ A ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಕುರಿತು ಸಂತಸ ವ್ಯಕ್ತಪಡಿಸಿರುವ ದಾಸ್​, ರಾಷ್ಟ್ರೀಯ ಮಹಿಳಾ ತಂಡಕ್ಕೆ ಬ್ಯಾಟಿಂಗ್​ ತರಬೇತುದಾರನಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಮುಂದಿನ ಇಂಗ್ಲೆಂಡ್​ ಸರಣಿಯಲ್ಲಿ ನನ್ನಲ್ಲಿರುವ ಸಾಮರ್ಥ್ಯ ಮತ್ತು ಕೌಶಲಗಳನ್ನು ತಂಡಕ್ಕೆ ಒದಗಿಸುತ್ತೇನೆ. ಆ ಮೂಲಕ ಸರಣಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ. ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ಎದುರು ಮೂರು ಮಾದರಿಯ ಕ್ರಿಕೆಟ್​​ ಸರಣಿಗೆ ಟೀಮ್​ ಇಂಡಿಯಾ ಜೂನ್​ 2ರಂದು ಪ್ರವಾಸ ಕೈಗೊಳ್ಳಲಿದ್ದು, 21 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

The post ಭಾರತ ಮಹಿಳಾ ತಂಡದ ಬ್ಯಾಟಿಂಗ್​​ ಕೋಚ್​ ಆಗಿ ಶಿವಸುಂದರ್ ದಾಸ್ ನೇಮಕ​​ appeared first on News First Kannada.

Source: newsfirstlive.com

Source link