ಭಾರತ ಸರ್ಕಾರಕ್ಕೆ ಟ್ವಿಟರ್​ ನೇರ ಸವಾಲು; ಕೇಂದ್ರ ಸಚಿವರ ಅಕೌಂಟೇ ಲಾಕ್

ಭಾರತ ಸರ್ಕಾರಕ್ಕೆ ಟ್ವಿಟರ್​ ನೇರ ಸವಾಲು; ಕೇಂದ್ರ ಸಚಿವರ ಅಕೌಂಟೇ ಲಾಕ್

ನವದೆಹಲಿ: ಕೇಂದ್ರ- ಟ್ವಿಟರ್ ನಡುವೆ ನಡೆಯುತ್ತಿದ್ದ ಮುಸುಕಿನ ಯುದ್ಧ ಒಂದು ಮಟ್ಟಕ್ಕೆ ತಣ್ಣಗಾಗಿತ್ತು ಎನ್ನುವಾಗಲೇ ಟ್ವಿಟರ್ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಅಕೌಂಟ್​ನ್ನು ಲಾಕ್ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲದ ನಂತರ ಅನ್​ಲಾಕ್ ಮಾಡಿದೆ.

ರವಿ ಶಂಕರ್ ಪ್ರಸಾದ್ ಅವರು ಯುಎಸ್​ನ ಡಿಜಿಟಲ್ ಮಿಲ್ಲೇನಿಯಮ್ ಕಾಪಿರೈಟ್ ಆ್ಯಕ್ಟ್​ನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದ ಟ್ವಿಟರ್ ಒಂದು ಗಂಟೆಗೂ ಹೆಚ್ಚು ಕಾಲ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನ ಅವರೇ ಬಳಸಲಾಗದಂತೆ ಲಾಕ್ ಮಾಡಿತ್ತು. ನಂತರ ಅವರ ಅಕೌಂಟ್​ನ್ನು ಅನ್​ಲಾಕ್ ಮಾಡಿರುವ ಟ್ವಿಟರ್ ರವಿಶಂಕರ್ ಪ್ರಸಾದ್ ಅವರಿಗೆ ವಾರ್ನಿಂಗ್ ಕೊಟ್ಟಿದೆ.

ನಿಮ್ಮ ಅಕೌಂಟ್​ಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಒಂದು ನೋಟಿಸ್ ಬಂದರೂ ಅದು ನಿಮ್ಮ ಅಕೌಂಟ್​ ಬ್ಲಾಕ್ ಆಗುವುದಕ್ಕೆ ಅಥವಾ ರದ್ದಾಗುವುದಕ್ಕೆ ಕಾರಣವಾಗಬಹುದು. ಇದರಿಂದ ಹೊರಗುಳಿಯಲು ನಮ್ಮ ಕಾಪಿರೈಟ್ ಪಾಲಿಸಿಯನ್ನು ಉಲ್ಲಂಘಿಸುವ ಪೋಸ್ಟ್​ಗಳನ್ನು ಮಾಡಬೇಡಿ. ನಿಮಗೆ ಸಂಬಂಧಿಸದ ಯಾವುದೇ ಮೆಟಿರಿಯಲ್​ನ್ನು ಪೋಸ್ಟ್ ಮಾಡಿದ್ದರೆ ತಕ್ಷಣವೇ ತೆಗೆದುಹಾಕಿ ಎಂದು ಹೇಳಿದೆ.

 

The post ಭಾರತ ಸರ್ಕಾರಕ್ಕೆ ಟ್ವಿಟರ್​ ನೇರ ಸವಾಲು; ಕೇಂದ್ರ ಸಚಿವರ ಅಕೌಂಟೇ ಲಾಕ್ appeared first on News First Kannada.

Source: newsfirstlive.com

Source link