ಭಾರತ U-19 ನಾಯಕ ಯಶ್ ಮೇಲೆ ಎಲ್ಲರ ಚಿತ್ತ -ಚಾಣಾಕ್ಷ ನಾಯಕತ್ವಕ್ಕೆ ಮಾಜಿ ಕ್ರಿಕೆಟಿಗರು ಫಿದಾ


ಇವತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ, ಬಿಗ್ ಡೇ. ಯಾಕಂದ್ರೆ ನಮ್ಮ ಅಂಡರ್ ನೈಂಟೀನ್ ತಂಡದ ಆಟಗಾರರು, ಯಶ್ ಧುಲ್ ಸಾರಥ್ಯದಲ್ಲಿ 5ನೇ ಬಾರಿ ವಿಶ್ವಕಪ್ ಗೆಲ್ಲೋಕೆ ಹೊರಟಿದ್ದಾರೆ. ಹಾಗಾದ್ರೆ ಚಾಣಾಕ್ಷ ನಾಯಕ ಯಶ್ ಧುಲ್, ಫೈನಲ್​​ನಲ್ಲಿ ತಂಡಕ್ಕೆ ಗೆಲುವು ತಂದು ಕೊಡ್ತಾರಾ..? ನೋಡೋಣ ಬನ್ನಿ…

ಅಂಡರ್ ನೈಂಟೀನ್ ವಿಶ್ವಕಪ್ ಟೂರ್ನಿ, ಇದೀಗ ಕ್ಲೈಮ್ಯಾಕ್ಸ್​ ಹಂತ ಬಂದು ತಲುಪಿದೆ. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡ್ತಿರುವ ಟೀಮ್ ಇಂಡಿಯಾ, ಸತತ 4ನೇ ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಸದ್ಯ ಪ್ರಶಸ್ತಿ ಗೆಲ್ಲೋ ಫೆವರಿಟ್ ಎನಿಸಿಕೊಂಡಿರುವ ಇಂಡಿಯಾ, ದಾಖಲೆಯ 5ನೇ ಬಾರಿ ಟೂರ್ನಿ ಗೆಲ್ಲೋ ವಿಶ್ವಾಸದಲ್ಲಿದೆ.

ಹೌದು..! ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರರೂ, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಅದ್ರಲ್ಲೂ ತಂಡ ಸೂಪರ್ ಸಾಲಿಡ್ ಪರ್ಫಾಮೆನ್ಸ್ ನೀಡಲು, ಕ್ಯಾಪ್ಟನ್ ಯಶ್ ಧುಲ್ ಕಾರಣ ಅಂದ್ರೆ, ತಪ್ಪಾಗೊಲ್ಲ.!! ಬ್ಯಾಟಿಂಗ್​​ನಲ್ಲಿ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್​ ಜೊತೆಗೆ ಚಾಣಾಕ್ಷ ನಾಯಕತ್ವದಿಂದಲೂ ಯಶ್​​, ಎಲ್ಲರ ಗಮನ ಸೆಳೆದಿದ್ದಾರೆ.

ಅಂದು ಅವಕಾಶಕ್ಕಾಗಿ ಬೇಡಿದ್ರು ಯಶ್​ ಧುಲ್..!

ಡೆಲ್ಲಿಯ ಬಾಲ್ ಭವನ್ ಶಾಲೆಯಲ್ಲಿ ಓದುತ್ತಿದ್ದಾಗ ಯಶ್ ಧುಲ್, ಸ್ಕೂಲ್​​ ಟೀಮ್​​ನಲ್ಲಿ ಅವಕಾಶ ಸಿಗದೆ ಪರದಾಡಿದ್ರು. ಆಗ ಯಶ್​, ಒಂದೇ ಒಂದು ಅವಕಾಶ ನೀಡಿ ಅಂತ, ಸ್ಕೂಲ್ ಪ್ರಿನ್ಸಿಪಾಲರನ್ನ ಕಾಡಿ ಬೇಡಿದ್ರು. 11 ವರ್ಷದ ಯಶ್ ಬೇಡಿಕೆಗೆ ಮಣಿದಿದ್ದ ಪ್ರಿನ್ಸಿಪಾಲ್, ಒಂದೇ ಒಂದು ಚಾನ್ಸ್​ ನೀಡಲು ಮನಸು ಮಾಡಿದ್ರು. ಅವಕಾಶಕ್ಕಾಗಿ ಕಾಯುತ್ತಿದ್ದ ಯಶ್, ಅಂಡರ್ 14 ತಂಡದ ವಿರುದ್ಧ ಅಜೇಯ 125 ರನ್​​ಗಳಿಸಿದ್ರು.

ತಂಡದ ಆಟಗಾರರಿಗೆ ಯಶ್, 500 ರೂ ಖರ್ಚು ಮಾಡಿದ್ರು..!

ಆ ಒಂದೇ ಒಂದು ಇನ್ನಿಂಗ್ಸ್​ ಯಶ್ ಧುಲ್​​​​​​ ಆತ್ಮವಿಶ್ವಾಸ ಹೆಚ್ಚಿಸಿತು. ಯಶ್​ ಬ್ಯಾಟಿಂಗ್​​ಗೆ ಮನಸೋತ ಸ್ಕೂಲ್​ ಪ್ರನ್ಸಿಪಾಲ್, ಯುವ ಕ್ರಿಕೆಟಿಗನಿಗೆ 500 ರೂಪಾಯಿ ಬಹುಮಾನ ನೀಡಿದ್ರು. ಟೀಮ್​​​​ ಮೇಟ್ಸ್​​ನಿಂದಲೇ ಸಕ್ಸಸ್ ಕಾಣಲು ಸಾಧ್ಯವಾಯಿತು ಎಂದ ಯಶ್, ಬಂದ ಹಣವನ್ನ ಎಲ್ಲರಿಗೂ ಟ್ರೀಟ್​ ನೀಡಿ ಖರ್ಚು ಮಾಡಿದ್ರು.

ಮಗನ ಸಕ್ಸಸ್ ಹಿಂದೆ ತಂದೆಯ ಪ್ರೀತಿ, ಪರಿಶ್ರಮ…!

ಯಶ್ ಧುಲ್ ಇವತ್ತು ಅಂಡರ್​​ ನೈಂಟೀನ್ ವಿಶ್ವಕಪ್​ನಲ್ಲಿ ಸಕ್ಸಸ್​​​ ಕಾಣೋದಕ್ಕೆ ತಂದೆ ವಿಜಯ್ ಸಹ ಕಾರಣ. ಯಾಕಂದ್ರೆ ಪ್ರೀತಿಯ ಮಗನಿಗೆ ವಿಜಯ್, ಮನೆಯ ಟೆರೆಸ್ ಮೇಲೆ ಪ್ರಾಕ್ಟೀಸ್​​​ ಮಾಡಲೆಂದೇ ನೆಟ್ಸ್​ ಸೆಟ್ಅಪ್ ಮಾಡಿದ್ದಾರೆ. ಕೋಚ್​​​​​​​​​ ನೆರವಿನಿಂದ ಪ್ರಾಕ್ಟೀಸ್ ಮತ್ತು ಫಿಟ್ನೆಸ್ ಟ್ರೈನಿಂಗ್ ನಡೆಸುತ್ತಿದ್ದ ಯಶ್, ಇನ್​ಸೈಡ್ ಔಟ್ ಶಾಟ್ ಅಭ್ಯಾಸ ಮಾಡಿದ್ದು, ಇದೇ ಸಮಯದಲ್ಲಿ.

ತಾಳ್ಮೆ ಯಶ್​ ಧುಲ್​ಗೆ ಪಾಠ ಕಲಿಸಿದ್ದು ಹೇಗೆ..?

2020ರಲ್ಲಿ ಯಶ್​​​, ಅವಕಾಶಗಳ ಬರ ಎದುರಿಸಿದ್ರು. ಆಗ ಸಮಯ, ಸಂದರ್ಭವನ್ನ ತಿಳಿದುಕೊಂಡ ಯಶ್, ಅವಕಾಶಕ್ಕಾಗಿ ತಾಳ್ಮೆಯಿಂದ ಕಾದರು. ಕ್ರಿಕೆಟ್ ಮತ್ತು ಜೀವನದಲ್ಲಿ ತಾಳ್ಮೆ ಎಷ್ಟು ಮುಖ್ಯ ಅಂತ ತಿಳಿದ ಯಂಗ್ ಯಶ್ ಧುಲ್, ಈಗ ದೇಶದ ಪ್ರತಿ ಮನೆಯಲ್ಲೂ ಮಾತಾಗಿದ್ದಾರೆ.

ಅಂಡರ್ -19 ನಾಯಕನ ಯಶಸ್ಸಿಗೆ ಇದೇ ಕಾರಣ..!

ಬಾಲ್ಯದಲ್ಲಿ ಯಶ್, ಸಿಂಗಲ್ಸ್​ ಮತ್ತು ಗ್ಯಾಪ್​​ನಲ್ಲಿ ಆಡೋದನ್ನ ಕರಗತ ಮಾಡಿಕೊಂಡಿದ್ದಾರೆ. ಕ್ರೀಸ್​​ನಲ್ಲಿ ಟೈಮ್ ಸ್ಪೆಂಡ್ ಮಾಡಿದಷ್ಟು ರನ್​ಗಳಿಸಬಹುದು ಅನ್ನೋದನ್ನ, ಯಶ್ ತಿಳಿದುಕೊಂಡಿದ್ದಾರೆ. ಹಾಗೇ ಪವರ್​ ಹಿಟ್ಟಿಂಗ್, ಟಚ್ ಪ್ಲೇ, ಚಿಪ್ ಚಾಟ್ಸ್​ ಚೆನ್ನಾಗೇ ಆಡಬಲ್ಲ ಯಶ್ ಸಕ್ಸಸ್​​ಗೆ, ಇದೇ ಕಾರಣ. ಒಟ್ನಲ್ಲಿ..! ಅವಕಾಶಗಳನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ, ನಮ್ಮ ಇಂಡಿಯಾ ಅಂಡರ್ ನೈಂಟೀನ್ ತಮಡದ ನಾಯಕ ಯಶ್ ಧೂಲ್​ರಿಂದ ಕಲಿಯಬೇಕು.

News First Live Kannada


Leave a Reply

Your email address will not be published.