ಒಂದೆಡೆ ಧವನ್​ ನೇತೃತ್ವದ ಟೀಮ್​ 2ನೇ ಏಕದಿನ ಪಂದ್ಯಕ್ಕೆ ಸಜ್ಜಾಗ್ತಿದ್ರೆ, ಅತ್ತ ಕೊಹ್ಲಿ ನೇತೃತ್ವದ ಪಡೆ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇಂಗ್ಲೆಂಡ್​ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯ ಕೊಹ್ಲಿ ಪಡೆಗೆ ಮುಖ್ಯವಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಬಳಿಕ ಸುದೀರ್ಘ 20 ದಿನಗಳ ಕಾಲ ವಿಶ್ರಾಂತಿಯಲ್ಲಿದ್ದ ಟೀಮ್​ ಇಂಡಿಯಾ, ಇಂದು ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಕಳೆದ 3 ದಿನಗಳಿಂದ ನೆಟ್ಸ್​​ನಲ್ಲಿ ಬೆವರು ಸುರಿಸಿರುವ ಕೊಹ್ಲಿ ಪಡೆ, ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ. ಅಗಸ್ಟ್​​ 4 ರಿಂದ ಆರಂಭವಾಗೋ ಟೆಸ್ಟ್​ ಸರಣಿಯ ದೃಷ್ಠಿಯಿಂದ, ಡುರ್ಹಾಮ್​ನಲ್ಲಿ ಇಂದಿನಿಂದ ನಡೆಯೋ ಕೌಂಟಿ ಇಲೆವೆನ್​ ವಿರುದ್ಧದ ಅಭ್ಯಾಸ ಪಂದ್ಯ, ಮಹತ್ವ ಪಡೆದುಕೊಂಡಿದೆ.

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬಳಿಕ ಅಭ್ಯಾಸ ಪಂದ್ಯದ ಅವಶ್ಯಕತೆ ಇತ್ತು ಅನ್ನೋದನ್ನ ಕೊಹ್ಲಿ ಹೇಳಿದ್ರು. ಈ ಹಿನ್ನೆಲೆಯಲ್ಲಿ ಶತಾಯುಗತಾಯ ಪ್ರಯತ್ನ ನಡೆಸಿದ ಬಿಸಿಸಿಐ, ಅಂತಿಮವಾಗಿ ಅಭ್ಯಾಸ ಪಂದ್ಯವನ್ನ ಆಯೋಜಿಸಿದೆ. ಇದೀಗ ಈ ಪಂದ್ಯ ಹಲವರ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ. ಈ ಅಭ್ಯಾಸ ಪಂದ್ಯದಲ್ಲಿ ಪರ್ಫಾಮೆನ್ಸ್​ ನೀಡಿದ್ರಷ್ಟೇ, ಆಂಗ್ಲರ ವಿರುದ್ಧದ ಸರಣಿಯಲ್ಲಿ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​​ ಸಿಗಲಿದೆ.

ಸಾಮರ್ಥ್ಯ ಹೊರ ಹಾಕಿದ್ರೆ ಕನ್ನಡಿಗ ಕೆಎಲ್​ ರಾಹುಲ್​ಗೆ ಸಿಗಲಿದ್ಯಾ ಅವಕಾಶ.?
ಸಾಹ, ಪಂತ್​ ಅಲಭ್ಯತೆಯಲ್ಲಿ ಕೆ.ಎಲ್​ ರಾಹುಲ್ ಇಂದು ಗ್ಲೌಸ್​​ ತೊಟ್ಟು ಕಣಕ್ಕಿಳಿಯಲಿದ್ದಾರೆ. ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ಗೆ ಸರ್ಕಸ್​​ ನಡೆಸ್ತಾ ಇರೋ ರಾಹುಲ್​ ಪಾಲಿಗೆ ಇದು ನಿರ್ಣಾಯಕವಾಗಿದೆ. ಇಲ್ಲಿ ಮಿಂಚಿದ್ರೆ ರಾಹುಲ್​ಗೆ ಇಂಗ್ಲೆಂಡ್​​ ವಿರುದ್ಧ ಆಡೋ ಅವಕಾಶ ಸಿಗೋ ಸಾಧ್ಯತೆಯಿದೆ. ವೈಫಲ್ಯದ ಸುಳಿಗೆ ಸಿಲುಕಿರುವ ಚೇತೇಶ್ವರ್​ ಪೂಜಾರ, ಅಜಿಂಕ್ಯಾ ರಹಾನೆ ಪಾಲಿಗೂ ಇದು, ಡು ಆರ್​ ಡೈ ಪಂದ್ಯವಾಗಿದೆ. ಇಲ್ಲಿ ಮತ್ತೇ ಫೆಲ್ಯೂರ್​​ ಕಂಡರೆ ಬೆಂಚ್​ಗೆ ಸೀಮಿತವಾಗೋ ಸಾಧ್ಯತೆಯಿದೆ. ಸ್ಥಾನಕ್ಕಾಗಿ ಹನುಮ ವಿಹಾರಿ ಕೂಡ ಟಫ್​ ಫೈಟ್​ ನಡೆಸ್ತಾ ಇದ್ದಾರೆ.

ಬೌಲಿಂಗ್​ ವಿಭಾಗದ ದೃಷ್ಠಿಯಿಂದಲೂ ಈ ಅಭ್ಯಾಸ ಪಂದ್ಯ, ಹೆಚ್ಚು ಮಹತ್ವ ಪಡೆದುಕೊಂಡಿದೆ. ಸುದೀರ್ಘ ವಿಶ್ರಾಂತಿಯ ಬಳಿಕ ಕಣಕ್ಕಿಳಿಯಲಿರುವ ಆಟಗಾರರು, ಇಲ್ಲಿ ಫಿಟ್​​ನೆಸ್​​​ ಪ್ರೂವ್​ ಮಾಡಬೇಕಿದೆ. ಇಂಗ್ಲೆಂಡ್​ ಎದುರಿನ ಸರಣಿಯಲ್ಲಿ ಅವಕಾಶಕ್ಕಾಗಿ ಬೌಲಿಂಗ್​ ವಿಭಾಗದಲ್ಲಿ ಪೈಪೋಟಿ ತೀವ್ರವಾಗಿದೆ. ಹೀಗಾಗಿ ಈ ಪಂದ್ಯದ ಪ್ರದರ್ಶನದ ಮಾನದಂಡದಲ್ಲಿ, ಆಟಗಾರರ ಆಯ್ಕೆಗೆ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ.

The post ಭಾರತ Vs ಕೌಂಟಿ XI ವಿರುದ್ಧ ಅಭ್ಯಾಸ ಪಂದ್ಯ-ಸಾಮರ್ಥ್ಯ ಹೊರ ಹಾಕಿದ್ರೆ ರಾಹುಲ್​ಗೆ ಅವಕಾಶ? appeared first on News First Kannada.

Source: newsfirstlive.com

Source link