ದುಬೈ: ನಗರದ ಅಲ್​ ಕುದ್ರಾ ಸೇತುವೆ ಬಳಿಯ ಎಮಿರೇಟ್ಸ್​ ರಸ್ತೆಯಲ್ಲಿ ವಾಹನಗಳ ನಡುವೆ ಬೃಹತ್ ಮಟ್ಟದ ಸರಣಿ ಅಪಘಾತ ಸಂಭವಿಸಿದೆ. ದುಬೈನಿಂದ ಶಾರ್ಜಾ ಕಡೆಗೆ ಸಾಗುತ್ತಿದ್ದ 34 ವಾಹನಗಳು ಒಂದರ ಹಿಂದೊಂದು ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ದೇಶದಲ್ಲಿ ಭಾರೀ ಬಿರುಗಾಳಿ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಈ ಅಪಘಾತಕ್ಕೆ ಸಂಭವಿಸಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಸರಣಿ ಅಪಘಾತದ ಬೆನ್ನಲ್ಲೇ ಎಮಿರೇಟ್ಸ್​ ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಪಘಾತಕ್ಕೀಡಾದ ವಾಹನಗಳ ಚಾಲಕರು, ನಮಗೆ ಸರಿಯಾಗಿ ರಸ್ತೆ ಕಾಣುತ್ತಿರಲಿಲ್ಲ. ಹೀಗಾಗಿ ಅಪಘಾತ ಉಂಟಾಯ್ತು ಎಂದು ದೂರಿದ್ದಾರೆ.

Image Source: dubaipolice

ಪ್ರತಿಕೂಲ ಹವಾಮಾನವಿದ್ದಾಗ ವಾಹನ ಚಲಾಯಿಸುವವರು ಎಚ್ಚರಿಕೆ ವಹಿಸಿ, ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಿ ಎಂದು ಅಲ್ಲಿನ ಸಂಚಾರ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಸೈಫ್​ ಮುಹೇರ್​ ಅಲ್​ ಮಝೂರಿ ಹೇಳಿದ್ದಾರೆ. ಚಾಲಕರು ನಿಧಾನವಾಗಿ ವಾಹನಗಳನ್ನ ಓಡಿಸಿ ಮತ್ತು ಇತರ ಕಾರುಗಳಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಂಡು ಡ್ರೈವ್ ಮಾಡಿ. ಓವರ್‌ಟೇಕ್ ಮಾಡುವುದು, ಸಿಗ್ನಲ್‌ ಜಂಪ್ ಅಥವಾ ಲೇನ್‌ಗಳನ್ನು ಬದಲಾಯಿಸುವುದನ್ನು ತಪ್ಪಿಸಿ, ಹೈ ಬೀಮ್ ಲೈಟ್​​ಗಳನ್ನ ಬಳಸಬೇಡಿ, ಧೂಳಿನಿಂದಾಗಿ ರಸ್ತೆ ಸರಿಯಾಗಿ ಕಾಣದಿದ್ದಾಗ ವಿಂಡ್​ಶೀಲ್ಡ್​ ವೈಪರ್​ಗಳನ್ನ ಬಳಸಿ ಎಂದು ದುಬೈ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

 

تصادم ٣٤ مركبة على شارع الإمارات بالاتجاه من دبي إلى الشارقة

وقع حادث تصادم بين ٣٤ مركبة على شارع الإمارات بعد جسر…

Posted by ‎شرطة دبي – الصفحة الرسمية‎ on Monday, 3 May 2021

The post ಭಾರೀ ಧೂಳಿನ ಚಂಡಮಾರುತ: ದುಬೈನಲ್ಲಿ 34 ವಾಹನಗಳ ನಡುವೆ ಸರಣಿ ಅಪಘಾತ appeared first on News First Kannada.

Source: newsfirstlive.com

Source link