ಚಾಮರಾಜನಗರ: ಜಿಲ್ಲೆಯಲ್ಲಿ ಭಾರೀ ಬಿರುಗಾಳಿ ಬೀಸುತ್ತಿದ್ದು, ಹಲವೆಡೆ ಹಾನಿ ಸೃಷ್ಟಿಸಿದೆ. ಹನೂರು ತಾಲೂಕಿನ ಮೈಸೂರಪ್ಪನದೊಡ್ಡಿಯಲ್ಲಿ ಭಾರೀ ಬಿರುಗಾಳಿಗೆ ವಿದ್ಯುತ್ ಕಂಬ ಮುರಿದುಬಿದ್ದಿದೆ.

ಜೊತೆಗೆ ಇಲ್ಲಿನ ಮನೆಯೊಂದರ ಮೇಲ್ಛಾವಣಿ ಹಾರಿಹೋಗಿದೆ. ಎನ್.ಮಹದೇವು ಎಂಬವರಿಗೆ ಸೇರಿದ ಮನೆ ಇದಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಮುರಿದುಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಅಂತ ತಿಳಿದುಬಂದಿದೆ.

ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

The post ಭಾರೀ ಬಿರುಗಾಳಿಗೆ ಮುರಿದ ವಿದ್ಯುತ್ ಕಂಬ, ಹಾರಿಹೋದ ಮನೆಯ ಮೇಲ್ಛಾವಣಿ appeared first on News First Kannada.

Source: newsfirstlive.com

Source link