ಬಾಲಿವುಡ್ ಸೆಲೆಬ್ರಿಟಿ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಸಂಭ್ರಮದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಮದುವೆಗೆ ಬರುವ ಅಥಿತಿಗಳು ಮದುವೆ ಸಂಭ್ರಮದ ಪೋಟೋ ವಿಡಿಯೋವನ್ನು ಸೆರೆಹಿಡಿಯುವಂತಿಲ್ಲ ಎಂಬ ಷರತ್ತನ್ನು ಕತ್ರಿನಾ ಹಾಗೂ ವಿಕ್ಕಿ ಹಾಕಿದ್ರು ಎನ್ನಲಾಗಿತ್ತು. ಆದ್ರೂ ಮದುವೆಗೆ ಆಗಮಿಸಿದವರಲ್ಲಿ ಯಾರೋ ಒಬ್ಬರು ಮದುವೆ ಸಂಭ್ರಮದ ವಿಡಿಯೋವನ್ನು ಸೆರೆಹಿಡಿದ್ದಾರೆ.
ರಾಜಸ್ಥಾನದಲ್ಲಿರುವ ಮಾಧೋಪುರದ ಸಿಕ್ಸ್ ಸೆನ್ಸ್ ಹೋಟೆಲ್ನಲ್ಲಿ ಡಿಸೆಂಬರ್ 9 ರಂದು ವಿಕ್ಕಿ ಹಾಗೂ ಕತ್ರಿನಾ ವಿವಾಹ ನಡೆಯುತ್ತಿದ್ದು, ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಆರಂಭಗೊಂಡಿವೆ. ನಿನ್ನೆ ರಾತ್ರಿ ನಡೆದ ಫಂಕ್ಷನ್ನ ವಿಡಿಯೋವೊಂದು ಲೀಕ್ ಆಗಿದ್ದು, ಇದರಲ್ಲಿ ಕೆಲ ಡ್ಯಾನ್ಸ್ರ್ಸ್ ಮೆಟ್ಟಿಲುಗಳ ಮೇಲೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ.
ತಮ್ಮ ಮದುವೆ ಸಂಭ್ರಮದ ದೃಶ್ಯಗಳನ್ನು ಯಾರೂ ಕ್ಲಿಕ್ಕಿಸದಂತೆ ನೋಡಿಕೊಳ್ಳಲು ಸಾಕಷ್ಟು ಜಾಗ್ರತೆ ವಹಿಸಿದ್ರೂ ಕೂಡ ವಿಕ್ಕಿ ಹಾಗೂ ಕತ್ರಿನಾ ಮದುವೆಯ ದೃಶ್ಯಗಳು ವೈರಲ್ ಆಗಿವೆ.