ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ ಇಡೀ ರಾತ್ರಿ ಎಡಬಿಡದೆ ಭೀಕರ ಮಳೆ ಸುರಿದಿದೆ. ಈ ಭೀಕರ ಮಳೆಗೆ ಮನೆ ಗೊಡೆ ಕುಸಿದ ಪರಿಣಾಮ ಸ್ಥಳದಲ್ಲೇ 2 ಹಸು, 2 ಮೇಕೆ ಜತೆ ಓರ್ವ ಬಾಲಕ ಮೃತಪಟ್ಟಿದ್ದಾನೆ.
10 ವರ್ಷದ ಗಗನ್ ಮೃತ ಬಾಲಕ. ಮಂಡ್ಯದ ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಸ್ಥಳೀಯ ಜವರೇಗೌಡರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಈ ವೇಳೆ ಗೋಡೆ ಪಕ್ಕದಲ್ಲೇ ಬೈಕ್ ಮೇಲೆ ಬಾಲಕ ಕೂತಿದ್ದ. ಆಗ ಕುಸಿದ ಗೋಡೆ ದಿಢೀರ್ ಏಕಾಏಕಿ ಬಾಲಕನ ಮೇಲೆ ಬಿದ್ದು, ಸಾವನ್ನಪ್ಪಿದ್ದಾನೆ.
ಗೋಡೆ ಕುಸಿದ ಕೂಡಲೇ ಇಡೀ ಮನೆ 2 ಹಸು, 2 ಮೇಕೆ ಮೇಲೆ ಬಿದ್ದಿವೆ. ಹೀಗಾಗಿ ಮೇಕೆ ಮತ್ತು ಹಸುಗಳು ಕೂಡ ಸಾವನ್ನಪ್ಪಿವೆ. ಇನ್ನು, ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.