ಉತ್ತರ ಕನ್ನಡ: ಶಿರಸಿಯ ಶಿರ್ಲೆ ಫಾಲ್ಸ್ ವ್ಯಾಪ್ತಿಯಲ್ಲಿ 6 ಪ್ರವಾಸಿಗರು ನಾಪತ್ತೆ‌ಯಾಗಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ನವಗರದಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆ ಫಾಲ್ಸ್ ಗೆ ಮೂರು ಬೈಕ್​ನಲ್ಲಿ 6 ಪ್ರವಾಸಿಗರು ಬಂದಿದ್ದರು ಎನ್ನಲಾಗಿದ್ದು ಇವರಿಗಾಗಿ ತಡರಾತ್ರಿಯಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆಶಿಪ್ ಡಲಾಯಿತ್, ಆಯಮ್ಮದ್ ಸೈಯದ್ ಶೇಖ್, ಅಬತಾಪ್ ಸದ್ದಾಂ ಶಿರಹಟ್ಟಿ, ಮಾಬುಸಾಬ್ ಮಕಬುಲಸಾಬ್ ಶಿರಹಟ್ಟಿ,ಶಾನು ಬಿಜಾಪುರಿ,‌ಇಪ್ತಿಯಾಜಿ ನಜೀರಸಾಬ್ ಮುಲ್ಲಾನವರ ನಾಪತ್ತೆಯಾದವರು.

The post ಭಾರೀ ಮಳೆಗೆ ತುಂಬಿ ಹರಿದ ಜಲಪಾತ; ಫಾಲ್ಸ್ ನೋಡಲು ಬಂದ 6 ಮಂದಿ ಪ್ರವಾಸಿಗರು ನಾಪತ್ತೆ ಶಂಕೆ appeared first on News First Kannada.

Source: newsfirstlive.com

Source link