ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರು; ಸಹಾಯಕ್ಕೆ ಬರುವಂತೆ ಸಿಎಂಗೆ ಸುಮಲತಾ ಮನವಿ

ಬೆಂಗಳೂರು: ನಗರದ ರೇಸ್​​ ಕೋರ್ಸ್​​​ ರಸ್ತೆಯಲ್ಲಿರುವ ಸರ್ಕಾರಿ ಅಧಿಕೃತ ನಿವಾಸದಲ್ಲಿ ಸಿಎಂ ಬಸವರಾಜ್​​ ಬೊಮ್ಮಾಯಿ ಅವರನ್ನು ಸಂಸದೆ ಸುಮಲತಾ ಅಂಬರೀಶ್​​ ಭೇಟಿಯಾದರು.

ಭಾರೀ ಮಳೆಯಿಂದ ಜಿಲ್ಲೆಯ ಬಡ ರೈತರು ಲಕ್ಷಾಂತರ ಮೌಲ್ಯದ ಬೆಳೆ, ಮನೆ ಹಾಗೂ ಜಾನುವಾರುಗಳ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಕೂಡಲೇ ರೈತಾಪಿ ಜನರಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಗಂಜಿ ಕೇಂದ್ರಗಳ ಜೊತೆಗೆ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ.

ಹಾಗೇ ಅಪಘಾತದಲ್ಲಿ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಶ್ರೀಮತಿ ಮುತ್ತಮ್ಮ ಮತ್ತು ಅವರ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರಿಗೆ ತಮ್ಮ ವಿಶೇಷ ಅನುದಾನದ ಅಡಿಯಲ್ಲಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು, ಸುಮಲತಾ ಮನವಿಗೆ ಶೀಘ್ರದಲ್ಲಿ ಸ್ಪಂದಿಸುವುದಾಗಿ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ.

News First Live Kannada

Leave a comment

Your email address will not be published. Required fields are marked *