ಭಾರೀ ಮೊತ್ತಕ್ಕೆ ಮಾರಾಟವಾದ ‘ಸೂರ್ಯವಂಶಿ’ ಸಿನಿಮಾ ಒಟಿಟಿ ರೈಟ್ಸ್​


ಬಾಲಿವುಡ್​ ನಟ ಆಕ್ಷಯ್​ ಕುಮಾರ್​ ಆಭಿನಯದ ಸೂರ್ಯವಂಶಿ ಸಿನಿಮಾವನ್ನು ನೆಟ್​ಫ್ಲಿಕ್ಸ್​​ ಭಾರಿ ಮೊತ್ತಕ್ಕೆ ಖರೀದಿಸಿದೆ. ಹೌದು, ಆಕ್ಷಯ್​ ಕುಮಾರ್​ ನಟನೆಯ “ಸೂರ್ಯವಂಶಿ” ಸಿನಿಮಾ ದೀಪವಾಳಿ ಹಬ್ಬದ ಪ್ರಯುಕ್ತ ನವೆಂಬರ್​ 5 ನೇ ತಾರೀಖು ಬಿಡುಗಡೆಯಾಗಿ ಸದ್ಯ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಸುಮಾರು 150 ಕೋಟಿ ಕಲೆಕ್ಷನ್​ ಗಳಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸೂರ್ಯವಂಶಿ ಸಿನಿಮಾ ಮುಂದಿನ ತಿಂಗಳು ಅಂದರೆ, ಡಿಸೆಂಬರ್​ 4 ನೇ ತಾರೀಖಿನಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್​ ಆಗಲಿದೆ. ಇನ್ನು ನೆಟ್‌ಫ್ಲಿಕ್ಸ್‌ ಸುಮಾರು 100 ಕೋಟಿ ಮೊತ್ತಕ್ಕೆ “ಸೂರ್ಯವಂಶಿ” ಸಿನಿಮಾವನ್ನು ಖರೀದಿಸಿದೆ ಎನ್ನಲಾಗಿದೆ.

“ಸೂರ್ಯವಂಶಿ” ಚಿತ್ರದ ನಿರ್ದೇಶಕ ರೋಹಿತ್​ ಶೆಟ್ಟಿ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ಸ್​ ಜೊತೆ ನೆಟ್‌ಫ್ಲಿಕ್ಸ್​ 75 ಕೋಟಿಗೆ ಚಿತ್ರವನ್ನು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡಿತ್ತು . ಆದ್ರೆ ಚಿತ್ರ ಥಿಯೇಟರ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ಹಳೆಯ ಒಪ್ಪಂದವನ್ನು ರದ್ದುಗೊಳಿಸಿ ನೆಟ್​ಫ್ಲಿಕ್ಸ್​ 100 ಕೋಟಿ ರೂಪಾಯಿಗೆ “ಸೂರ್ಯವಂಶಿ” ಸಿನಿಮಾವನ್ನು ಖರೀದಿಸಿದೆ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *