ಭಾರೀ ಮೊತ್ತಕ್ಕೆ ಲಖನೌ ಪಾಲಾದ KL ರಾಹುಲ್​​​.. ಹಾರ್ದಿಕ್​ ಪಾಂಡ್ಯಾಗೆ ಅಹಮದಾಬಾದ್​​ ಮಣೆ


ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಆಕ್ಷನ್​ಗೆ ಕೌಂಟ್​ಡೌನ್​ ಆರಂಭವಾದ ಬೆನ್ನಲ್ಲೇ, ಎರಡು ನೂತನ ಫ್ರಾಂಚೈಸಿಗಳು ತಾವು ಆಯ್ಕೆ ಮಾಡಿಕೊಂಡಿರುವ ಆಟಗಾರರ ಹೆಸರನ್ನ ಅಧಿಕೃತವಾಗಿ ತಿಳಿಸಿವೆ. ಲಖನೌ ಫ್ರಾಂಚೈಸಿ ಈ ಮೂದಲು ವರದಿಯಾದಂತೆ ಕೆಎಲ್​ ರಾಹುಲ್​, ಮಾರ್ಕಸ್​ ಸ್ಟೋಯಿನಿಸ್​ ಹಾಗೂ ರವಿ ಬಿಷ್ನೋಯ್ ಅವರನ್ನ​ ಡ್ರಾಫ್ಟ್​ ಪಿಕ್​ ಮೂಲಕ ಅಯ್ಕೆ ಮಾಡಿಕೊಂಡಿದೆ.

ಆರ್‌.ಪಿ ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಕ್ನೋ ಫ್ರಾಂಚೈಸಿ, 17 ಕೋಟಿ ಮೊತ್ತಕ್ಕೆ ಕೆ.ಎಲ್‌. ರಾಹುಲ್, 9.2 ಕೋಟಿ ಮೊತ್ತಕ್ಕೆ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮಾರ್ಕಸ್ ಸ್ಟೋಯಿನಿಸ್ ಮತ್ತು 4 ಕೋಟಿ ಮೊತ್ತಕ್ಕೆ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಖರೀದಿಸಿದೆ.
ಇನ್ನು 17 ಕೋಟಿ ಮೊತ್ತಕ್ಕೆ ಸೇಲ್​ ಆಗಿರುವ ರಾಹುಲ್​, ಲೀಗ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ.

ಇನ್ನು ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಹಾರ್ದಿಕ್​ ಜೊತೆಗೆ ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಕೂಡ ಫ್ರಾಂಚೈಸ್ ಖರೀದಿಸಿದೆ. ಹಾರ್ದಿಕ್ ಮತ್ತು ರಶೀದ್ ಅವರನ್ನು ತಲಾ 15 ಕೋಟಿ ಮೊತ್ತಕ್ಕೆ ಖರೀದಿ ಮಾಡಲಾಗಿದ್ದು, ಶುಭಮನ್​ ಗಿಲ್​ ಜೊತೆಗೆ 8 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

The post ಭಾರೀ ಮೊತ್ತಕ್ಕೆ ಲಖನೌ ಪಾಲಾದ KL ರಾಹುಲ್​​​.. ಹಾರ್ದಿಕ್​ ಪಾಂಡ್ಯಾಗೆ ಅಹಮದಾಬಾದ್​​ ಮಣೆ appeared first on News First Kannada.

News First Live Kannada


Leave a Reply

Your email address will not be published. Required fields are marked *