ಮುಂಬೈ: ಸತತ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಮುಗ್ಗರಿಸಿದೆ. ಈ ಸೋಲಿನ ಬೆನ್ನಲ್ಲೇ ವಿರಾಟ್ ಪಡೆಗೆ ಮತ್ತೊಂದು ಆಘಾತ ಎದುರಾಗಿದೆ.

ಆರ್ ಸಿಬಿ ತಂಡದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಆಟಗಾರರಾದ ಆ್ಯಡಂ ಜಾಂಪಾ, ಕೇನ್ ರಿಚರ್ಡ್ ಸನ್ ಐಪಿಎಲ್ ತೊರೆದು ತವರಿಗೆ ಹೊರಡಲು ಸಿದ್ದರಾಗಿದ್ದಾರೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್: ಅರ್ಧದಲ್ಲೇ ಐಪಿಎಲ್ ತೊರೆದ ಸ್ಪಿನ್ನರ್ ಅಶ್ವಿನ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಆರ್ ಸಿಬಿ ಮ್ಯಾನೇಜ್ ಮೆಂಟ್ ಖಚಿತಪಡಿಸಿದೆ. ಆ್ಯಡಂ ಜಾಂಪಾ, ಕೇನ್ ರಿಚರ್ಡ್ ಸನ್ ತಮ್ಮ ವೈಯಕ್ತಿಕ ಕಾರಣದಿಂದ ಆಸ್ಟ್ಟ್ರೇಲಿಯಾಗೆ ತೆರಳಲಿದ್ದಾರೆ. ಆರ್ ಸಿಬಿ ತಂಡ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತದೆ ಎಂದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ 69 ರನ್ ಅಂತರದ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ 20 ಓವರ್ ನಲ್ಲಿ 191 ರನ್ ಗಳಿಸಿದ್ದರೆ, ಆರ್ ಸಿಬಿ ತಂಡ ಕೇವಲ 122 ರನ್ ಮಾತ್ರ ಗಳಿಸಿತ್ತು.

ಕ್ರೀಡೆ – Udayavani – ಉದಯವಾಣಿ
Read More

By

Leave a Reply