ಭಾವನಾ ಚಿಣ್​ಮಿಣಿಕಿ ಲೇಡಿ ಫೈರ್ ಲುಕ್ ಗೆ ಫ್ಯಾನ್ಸ್ ಫಿದಾ

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷಿತ ‘ಭಜರಂಗಿ 2′ ಸಿನಿಮಾದ ನಾಯಕಿಯ  ಹೊಸ  ಪೋಸ್ಟರ್  ಇದೀಗ ಬಿಡುಗಡೆಗೊಂಡಿದ್ದು, ನಟಿ ಭಾವನಾ ಮೆನನ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ವೇದಿಕೆಯಲ್ಲಿ ಚಿನಿಮಿನಿಕಿ-ದಿ ಲೇಡಿ ಫೈರ್’ ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ನ ಪೋಸ್ಟರ್ ಅನ್ನು ಸಿನೆಮಾ ತಂಡ ಹಂಚಿಕೊಂಡಿದೆ.

ಶಿವಣ್ಣನ ಜನ್ಮದಿನದಂದು, ನಿರ್ದೇಶಕ ಎ. ಹರ್ಷ ಅವರ ಬತ್ತಳಿಕೆಯಿಂದ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು.  ದೊಡ್ಡ ಕ್ಯಾನ್ವಾಸ್‌ನಲ್ಲಿ ‘ಭಜರಂಗಿ 2’ ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಭಜರಂಗಿ’ ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ.

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ ‘ಭಜರಂಗಿ 2’ ಎಲ್ಲರ ಮನ ಗೆದ್ದಿತು. ‘ಕೆಜಿಎಫ್‌’ ರೀತಿಯೇ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಗುಣಮಟ್ಟದಲ್ಲಿ ‘ಭಜರಂಗಿ 2’ ಸಿದ್ಧವಾಗಿದೆ ಎಂಬುದಕ್ಕೆ ಟೀಸರ್‌ ಸಾಕ್ಷಿ ನೀಡಿತ್ತು.

‘ಭಜರಂಗಿ 2’ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ‘ಭಜರಂಗಿ 2’ ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ.

News First Live Kannada

Leave a comment

Your email address will not be published. Required fields are marked *