ಬಿಗ್‍ಬಾಸ್ ಮನೆಯಲ್ಲಿ ವೈಷ್ಣವಿ ಹಿಂದಿನ ಸೀಸನ್‍ನಲ್ಲಿ ಮದುವೆ ಕುರಿತಾಗಿ ಸಾಕಷ್ಟು ಮಾತನಾಡಿದ್ದರು. ಹೀಗಾಗಿ ಈ ಬಾರಿ ಮತ್ತೆ ಮದುವೆ ಕುರಿತಾಗಿ ಮಾತನಾಡುವುದಿಲ್ಲ ಎಂದು ಸುದೀಪ್ ಬಳಿ ಹೇಳಿಕೊಂಡಿದ್ದರು. ಆದರೆ ಮತ್ತೆ ಮದುವೆ ವಿಚಾರವಾಗಿ ಮಾತನಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಹುಡುಗನ ಕುರಿತಾಗಿ ಸಣ್ಣ ಸುಳಿವು ಕೊಟ್ಟಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ಅವರ ತಾಯಿ ಬೇಸರಗೊಂಡಿದ್ದರು. ಇನ್ನೂ ಮದುವೆ ಆಗಿಲ್ಲ ಎಂದು ಕೊರಗಿದರೆ ಮನೆಯವರ ಬಗ್ಗೆ ವೀಕ್ಷಕರು ಏನಂದುಕೊಳ್ಳುವುದಿಲ್ಲ ಎಂದು ವೈಷ್ಣವಿ ತಾಯಿ ಪ್ರಶ್ನೆ ಮಾಡಿದ್ದರು. ಇದು ವೈಷ್ಣವಿಗೆ ಮುಜುಗರ ತಂದಿತ್ತು. ಅಲ್ಲದೆ ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನಲ್ಲಿ ವೇದಿಕೆ ಏರುವಾಗ ವೈಷ್ಣವಿ ಅವರು ಈ ಬಾರಿ ಮದುವೆ ವಿಚಾರ ಮಾತನಾಡುವುದಿಲ್ಲ ಎಂದು ಹೇಳಿದ್ದರು.

ಮಂಜು ಹಾಗೂ ವೈಷ್ಣವಿ ಒಂದೆಡೆ ಕುಳಿತು ಮಾತನಾಡುತ್ತಿದ್ದರು. ನಿಮ್ಮ ಮದುವೆ ಯಾವಾಗ ಎಂದು ಮಂಜು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವೈಷ್ಣವಿ ತಂದೆ-ತಾಯಿ ಯಾವಾಗ ನೋಡುತ್ತಾರೋ ಆಗ ನಾನು ಮದುವೆ ಆಗುತ್ತೇನೆ ಎಂದರು. ಹಾಗಾದರೆ ಇನ್ನೂ ಎರಡು ವರ್ಷ ವಿಳಂಬವಾಗಬಹುದೇ ಎಂದು ಮಂಜು ಪ್ರಶ್ನೆ ಮಾಡಿದರು. ಆಗ ವೈಷ್ಣವಿ, ಇಲ್ಲ ಅಷ್ಟೊಂದು ವಿಳಂಬವಿಲ್ಲ. ಮುಂದಿನ ವರ್ಷದ ವೇಳೆಗೆ ನಾನು ಮದುವೆ ಆಗುತ್ತೇನೆ. ಸಂಬಂಧಿಗಳಲ್ಲಿ ಮದುವೆ ಆಗುವುದಿಲ್ಲ. ಅದೂ ಅರೆಂಜ್ ಮ್ಯಾರೇಜ್ ಎಂದರು.

ಆಗ ಮಂಜು ಮದುವೆ ಕುರಿತಾಗಿಯೂ ಮಾತನಾಡಿದ್ದಾರೆ. ನಾನು ಲವ್ ಮಾಡಿದ್ರೆ, ಹುಡುಗಿ ನೋಡಿದ್ರೆ ತಾಳಿ ಕಟ್ಟಿಕೊಂಡೆ ಕರ್ಕೊಂಡು ಬರುತ್ತಿದ್ದೆನು. ಆದರೆ ನಾನು ಹುಡುಗಿಯನ್ನು ನೋಡಬೇಕು. ನಾನು ಕೂಡ ಅರೆಂಜ್ ಮ್ಯಾರೇಜ್ ಆಗೋದು ಎಂದು ಮಂಜು ಹೇಳಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾಕಷ್ಟು ಮದುವೆ ವಿಚಾರಗಳು ಪ್ರಸ್ತಾಪವಾಗುತ್ತಲೇ ಇದೆ. ವೈಷ್ಣವಿ ಕೊಟ್ಟಿರುವ ಸುಳಿವಿನಿಂದ ಅವರ ಹುಡುಗ ಯಾರು ಎಂದು ಬಿಗ್‍ಬಾಸ್ ವೀಕ್ಷಕರು ಹುಡುಕುತ್ತಿದ್ದಾರೆ.

ಈ ಹಿಂದೆ ಮದುವೆ ವಿಚಾರವಾಗಿ ಮಾತನಾಡಿದ ವೈಷ್ಣವಿಗೆ ಸಾಕಷ್ಟು ಮದುವೆ ಪ್ರಪೋಸ್‍ಗಳು ಬಂದಿದ್ದವಂತೆ ಹೀಗೆಂದು ವೈಷ್ಣವಿ ಹೇಳಿಕೊಂಡಿದ್ದರು. ಈ ಬಾರಿ ಮತ್ತೆ ಮದುವೆ ಕುರಿತಾಗಿ ಮಾತನಾಡಿದ್ದಾರೆ.

The post ಭಾವಿಪತಿಯ ಸುಳಿವು ಕೊಟ್ಟ ವೈಷ್ಣವಿ appeared first on Public TV.

Source: publictv.in

Source link