ಭಾವಿ ಪತ್ನಿಯಿಂದ ಕಿರುಕುಳ ಆರೋಪ; ಮನನೊಂದು ಯುವತಿ ಆತ್ಮಹತ್ಯೆ


ಹುಬ್ಬಳ್ಳಿ: ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 25 ವರ್ಷದ ಪವಿತ್ರ ಎಂಬ ಯುವತಿ ಈ ರೀತಿ ಆತ್ಮಹತ್ಯೆಮಾಡಿಕೊಂಡಿದ್ದಾಳೆ.

ಸೆಪ್ಟೆಂಬರ್ 1 ರಂದು ಹಾವೇರಿ ಮೂಲದ ಅಭಿನಂದನ್ ಎಂಬ ಯುವಕನ ಜೊತೆ ಪವಿತ್ರಳ ಏಂಗಜ್ಮೆಂಟ್ ಆಗಿತ್ತು. ಭಾವಿ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಅಭಿನಂದನ್, ಏಂಗಜ್ಮೆಂಟ್ ಆದಾಗಿನಿಂದಲೂ ಕಿರುಕುಳ ನೀಡುತ್ತಿದ್ದ ಅಂತ ಹೇಳಲಾಗಿದೆ.

ಇನ್ನು ಕಳೆದ ವಾರವಷ್ಟೇ ದಾಂಡೇಲಿಯಲ್ಲಿ ಫ್ರಿ ವೆಡ್ಡಿಂಗ್ ಶೂಟಿಂಗ್ ಪವಿತ್ರಳನ್ನ ಅಭಿನಂದನ್ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿಂದ ಬಂದ ನಂತರವೂ ವಿಪರಿತ ಕಿರುಕುಳ ನೀಡಿದ್ದನಂತೆ. ಇದ್ರಿಂದ ಮನನೊಂದು ಪವಿತ್ರ ಮನೆಯಲ್ಲೆ ನೇಣಿಗೆ ಶರಣಾಗಿದ್ದಾಳೆ.

ಸದ್ಯ ಭಾವಿ ಪತಿ ಅಭಿನಂದನ್ ವಿರುದ್ದ ಕುಟುಂಬಸ್ಥರು ಆರೋಪ ಮಾಡಿದ್ದು, ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published.