ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಬಿಗ್​ ಬಾಸ್​​ಗೆ ಸ್ಪರ್ಧಿ; ಈ ಕಲಾವಿದನ ಬದುಕು ಎಷ್ಟು ಕಷ್ಟ ಇತ್ತು ಗೊತ್ತಾ? | Bigg Boss Lokesh Enter to Bigg Boss OTT Kannada Here is his Life journey


Bigg Boss OTT kannada: ‘ಸೆಲೆಬ್ರಿಟಿ ಲೈಫ್ ಕೆಲವೊಮ್ಮೆ ಚುಚ್ಚುತ್ತೆ. ಯಾವ ಪಾತ್ರ ಸಿಕ್ಕರೂ ಮಾಡ್ತೀನಿ. ಜೀವನ ನಡೆಸಬೇಕಿದೆ. ಈ ಅವಕಾಶದಿಂದ ಜೀವನ ಬದಲಾಗಬಹುದು ಎಂಬ ಉದ್ದೇಶ ಇದೆ’ ಎಂದಿದ್ದಾರೆ ಲೋಕೇಶ್.

Bigg Boss OTT Kannada Season 1: ಬಿಗ್ ಬಾಸ್ ಮನೆಗೆ ಬರುವ ಅನೇಕ ಸ್ಪರ್ಧಿಗಳ ಹಿಂದೆ ಒಂದು ಕಷ್ಟದ ಕಥೆ ಇರುತ್ತದೆ. ಮುಂದೆ ಒಂದು ದೊಡ್ಡ ಕನಸು ಇರುತ್ತದೆ. ಅದೇ ರೀತಿ ಈಗ ‘ಬಿಗ್ ಬಾಸ್​​ ಒಟಿಟಿ’ಗೆ ಎಂಟ್ರಿ ಕೊಟ್ಟ ಲೋಕೇಶ್ ಅವರು ಈ ಸಾಲಿಗೆ ಸೇರುತ್ತಾರೆ. ಅವರ ಹಿಂದೆ ಒಂದು ಕಣ್ಣೀರ ಕಥೆ ಇದೆ. ದೊಡ್ಮನೆಯಿಂದ ಬದುಕು ಬದಲಾಗಬಹುದು ಎಂಬ ಕನಸಿದೆ. ಅವರು ತಮ್ಮ ಕಷ್ಟದ ಜೀವನದ ಬಗ್ಗೆ ಮಾತನಾಡಿದ್ದಾರೆ.

‘ಮೊದಲು ನನ್ನ ಕಂಡರೆ ಎಲ್ಲರೂ ನೆಗ್ಲೆಟ್ ಮಾಡುತ್ತಿದ್ದರು. ಈಗ ಸೆಲ್ಫೀ ಕೇಳುತ್ತಾರೆ. ನನ್ನ ಕಥೆಯಿಂದ ಕೆಲವರಿಗೆ ಸ್ಫೂರ್ತಿ ಸಿಗಬಹುದು. ನನ್ನ ತಂದೆಗೆ ಮೊದಲ ಹೆಂಡತಿ ತೀರಿಕೊಂಡರು. ಅವರು ಮತ್ತೆ ಮದುವೆ ಆದರು. ಆ ಜೋಡಿಗೆ ಹುಟ್ಟಿದವನು ನಾನು. 9ನೇ ವಯಸ್ಸಿಗೆ ಮನೆ ಬಿಟ್ಟು ಹೋದೆ. ರೈಲು ಹತ್ತಿ ಬೇರೆ ಬೇರೆ ಊರಿಗೆ ಹೋಗುತ್ತಿದೆ’ ಎಂದು ಕಷ್ಟದ ಕಥೆ ಹೇಳಿಕೊಂಡಿದ್ದಾರೆ ಅವರು.

‘ನಾನು ಪೇಪರ್ ಆಯ್ದುಕೊಂಡು ಜೀವನ ಮಾಡಿದ್ದೀನಿ. ಭಿಕ್ಷೆ ಬೇಡಿದ್ದೀನಿ. ಮೂಕ ಎಂದು ಹೇಳಿಕೊಂಡು ದುಡ್ಡು ಕೇಳಿದ್ದೇನೆ. ಭಿಕ್ಷೆ ಬೇಡುತ್ತಾ ನನ್ನ ನಟನೆ ಆರಂಭ ಆಯಿತು. ಬೆಂಗಳೂರಿನ ಕಬ್ಬನ್ ಪಾರ್ಕ್​ನಲ್ಲಿ ದುಡ್ಡು ಕೇಳುತ್ತಿದ್ದೆ. ನಾನು ಮೂಕ ಎಂದು ಎಲ್ಲರೂ ದುಡ್ಡು ಕೊಡುತ್ತಿದ್ದರು. ಒಂದು ಟ್ರಸ್ಟ್​​ನವರು ನನ್ನನ್ನು ಕರೆದುಕೊಂಡು ಹೋಗಿ ಆಶ್ರಯ ಕೊಟ್ಟರು. ಅವರು ಇರಲಿಲ್ಲ ಎಂದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದಿದ್ದಾರೆ ಲೋಕೇಶ್.

TV9 Kannada


Leave a Reply

Your email address will not be published. Required fields are marked *