ಜೀವನವೇ ಬೇಡ ಅಂತ ಬೇಸತ್ತಿದ್ದವನಿಗೆ ಪಿಎಸ್ಐ ಶಿವರಾಜ್ ಜೀವನದ ಹಾದಿ ತೋರಿಸಿ ಮಾನವೀಯತೆ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೃತ್ತಿಯಲ್ಲಿ ಟೈಲರ್ ಆಗಿದ್ದ ಪಾವಗಡ ಮೂಲದ ಶಂಕರ್, ಎರಡು ವರ್ಷಗಳ ಹಿಂದೆ ಲೋ ಬಿಪಿಯಿಂದ ಪತ್ನಿ ಸಾವನ್ನಪ್ಪಿದ್ರಿಂದ ತನ್ನ ಟೈಲರ್ ವೃತ್ತಿ ಬಿಟ್ಟು ಊರು ಊರು ಅಲೆಯೋಕೆ ಶುರು ಮಾಡಿದ್ದ.
ಸದ್ಯ ಈತ ಬೆಂಗಳೂರಿನ ಮಡಿವಾಳ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ್ ಕಣ್ಣಿಗೆ ಬಿದ್ದಿದ್ದಾನೆ. ಇದಾದ ಬಳಿಕ ಶಂಕರ್ ಒಳ್ಳೆ ಬರಹಗಾರ, ಶ್ಲೋಕಗಳನ್ನ ಸ್ಪಷ್ಟವಾಗಿ ಹೇಳುತ್ತಾನೆ. ಹಾಗೆ ಹಲವು ಕವನಗಳನ್ನ ಬರೆದಿರೋದನ್ನ ಕಂಡು ಬೆರಗಾಗಿದ್ದರು ಪಿಎಸ್ಐ ಶಿವರಾಜ್.
ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಶಂಕರ್ಗೆ ಟೈಲರ್ ಕೆಲಸ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ. ಪಿಎಸ್ಐ ಶಿವರಾಜ್ ಅವರ ಈ ಕೆಲಸಕ್ಕೆ ಸಾರ್ವಜನಿಕರಿಂದ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ.