ಭೀಕರವಾಗಿ ಮರಕ್ಕೆ ಕಾರು ಡಿಕ್ಕಿ; ಧಗಧಗನೆ ಹೊತ್ತಿ ಉರಿದ ಕಾರು.. ಭಾರೀ ಅನಾಹುತ 


ಶಿವಮೊಗ್ಗ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಧಗಧಗನೆ ಹೊತ್ತಿ ಉರಿದಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರ ಹೊರವಲಯದ ತೀರ್ಥಹಳ್ಳಿ ರಸ್ತೆಯ ಸಕ್ರೇಬೈಲಿನ ಬಳಿ ನಡೆದಿದೆ.

ಜಿಲ್ಲೆಯ ವೆಂಕಟೇಶ್ ನಗರದ ಸನತ್ ಎಂಬಾತ ಸೇರಿ ಮೂವರು ಮಂಡಗದ್ದೆಯಿಂದ ಶಿವಮೊಗ್ಗ ಕಡೆಗೆ ಸ್ಕೋಡಾ ಕಾರಿನಲ್ಲಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಸನತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಭದ್ರಾವತಿಯ ಉಜ್ಜನೀಪುರದ ರುದ್ವಿಕ್ ಮತ್ತು ಅನೋಕ್ ಎಂಬುವವರಿಗೆ ಗಾಯಗಳಾಗಿದ್ದು, ಶಿವಮೊಗ್ಗದ ಎನ್.ಹೆಚ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ತುಂಗಾ ನಗರದ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ರು.

 

News First Live Kannada


Leave a Reply

Your email address will not be published. Required fields are marked *