ದಾವಣಗೆರೆ: ಹೋಟೆಲ್​​ನಲ್ಲಿ ಶಾರ್ಟ್ ಸರ್ಕ್ಯೂಟ್​ ಸಂಭವಿಸಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಬಿಐಇಟಿ ಕಾಲೇಜ್ ರೋಡ್​ನಲ್ಲಿ ನಡೆದಿದೆ.

ಇಲ್ಲಿನ ಮಮತಾ ಉಪಹಾರ ಹೋಟೆಲ್​​ನಲ್ಲಿ ಶಾರ್ಟ್​ ಸರ್ಕ್ಯೂಟ್ ಸಂಭವಿಸಿ ಅನಾಹುತ ನಡೆದು ಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಪೀಠೋಪಕರಣ ಸುಟ್ಟು ಭಸ್ಮವಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆಯು ಅಕ್ಕಪಕ್ಕದ ಕೊಠಡಿಗೂ ಹಾನಿಯುಂಟು ಮಾಡಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

The post ಭೀಕರ ಅನಾಹುತ.. ಶಾರ್ಟ್​​ ಸರ್ಕ್ಯೂಟ್​​ನಿಂದ ಹೊತ್ತಿ ಉರಿದ ಹೋಟೆಲ್ appeared first on News First Kannada.

Source: newsfirstlive.com

Source link