ಭೀಕರ ಕಾರು ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು


ಕಲಬುರ್ಗಿ: ಯಲಗೂಡ ಶ್ರೀಗಳ ಕಾರು ಅಪಘಾತ ಪ್ರಕರಣ ಸಂಬಂಧ ಭಯಾನಕ ದೃಶ್ಯವೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲಬುರಗಿಯ ಕೂಡಿ ಕ್ರಾಸ್ ಬಳಿ ಗುರುಲಿಂಗ ಶ್ರೀಗಳಿಗೆ ಸೇರಿದ ಫಾರ್ಚುನರ್​ ಕಾರ್​ ವೇಗವಾಗಿ ಬಂದು ಪಾದಚಾರಿಗಳನ್ನ ಬಲಿ ಪಡೆದ ವಿಡಿಯೋ ಲಭ್ಯವಾಗಿದೆ.

ಕಾರಿನ ವೇಗಕ್ಕೆ ಪಾದಾಚಾರಿಗಳಾದ ದಂಪತಿಗಳು ಸುಮಾರು 30 ಅಡಿ ದೂರದವರೆಗೂ ಕಾರಿಗೆ ಸಿಲುಕಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಸಾಗರದಲ್ಲಿ ಭೀಕರ ಅಪಘಾತ; ಬೈಕ್​ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯರಿಗೆ ಗುದ್ದಿದ ಆಟೋ

News First Live Kannada


Leave a Reply

Your email address will not be published. Required fields are marked *