ಭೀಕರ: ದಾಂಡೇಲಿ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು, ಓರ್ವ ಯುವತಿ ಸಾವು | Road accident in dandeli in uttara kannada district woman died on spot


ಭೀಕರ: ದಾಂಡೇಲಿ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು, ಓರ್ವ ಯುವತಿ ಸಾವು

ಭೀಕರ: ದಾಂಡೇಲಿ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು, ಓರ್ವ ಯುವತಿ ಸಾವು

ಕಾರವಾರ: ದಾಂಡೇಲಿ ನಗರದ (dandeli) ಜೆ. ಎನ್. ಎಸ್ ರಸ್ತೆಯ ಡಿವೈಡರ್ (road divider) ಮೇಲೆ ನಿಂತಿದ್ದ ನಾಲ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾವನನ್ನು ಬೆಂಗಳೂರಿಗೆ ಬಿಡಲು ತನ್ನ ಅಕ್ಕನೊಂದಿಗೆ ಬಂದಿದ್ದ ಬಿಂದು ಗುಡಿ ಎಂಬ 24 ವರ್ಷದ ಯುವತಿ ಸಾವಿಗೀಡಾದ ನತದೃಷ್ಟೆ.

ಬಸ್‌ ನಿಲ್ದಾಣದಿಂದ ವಾಪಾಸ್ ಬರುವಾಗ ರಸ್ತೆ ದಾಟಿ ಡಿವೈಡರ್ ಮೇಲೆ ಆ ನಾಲ್ವರೂ ಒಟ್ಟುಗೂಡಿ ನಿಂತಿದ್ದರು. ಏಕಾಏಕಿ ಬಂದ ಕಾರು ( car accident) ಆ ನಾಲ್ವರ ಮೇಲೆ ಹತ್ತಿ, ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಬರುತ್ತಿದ್ದ ಬಸ್‌‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ. ದಾಂಡೇಲಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣ ದಾಂಡೇಲಿ ನಗರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

TV9 Kannada


Leave a Reply

Your email address will not be published.