ಭೀಕರ ದುರ್ಘಟನೆ; ಕಣ್ಣೂರು-ಬೆಂಗಳೂರು ಎಕ್ಸ್​​ಪ್ರೆಸ್​ ರೈಲಿನ ಮೇಲೆ ಕುಸಿದ ಕಲ್ಲು ಬಂಡೆಗಳು


ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್​​ಪ್ರೆಸ್​ ರೈಲು ಪ್ರಯಾಣಿಸುತ್ತಿದ್ದಾಗ ಗುಡ್ಡ ಕುಸಿದ ಘಟನೆ ನಡೆದಿದೆ.

Image

ಇಂದು ಮುಂಜಾನೆ 3.50ರ ಸುಮಾರಿಗೆ ತಮಿಳುನಾಡು ತೊಪ್ಪುರು-ಸವದಿ ಘಾಟ್​​ ಮಧ್ಯದಲ್ಲಿ ದುರ್ಘಟನೆ ನಡೆದಿದೆ. ರೈಲು ಪ್ರಯಾಣಿಸುತ್ತಿದ್ದಾಗ ಕಲ್ಲು ಬಂಡೆಗಳು ಹಳಿ ಮೇಲೆ ಉರುಳಿ ಬಿದ್ದಿವೆ.

ಪರಿಣಾಮ 5 ಬೋಗಿಗಳು ಹಳಿ ತಪ್ಪಿ ಹೋಗಿವೆ. ರೈಲಿನಲ್ಲಿ ಒಟ್ಟು 2348 ಪ್ರಯಾಣಿಕರು ಇದ್ದರು. ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

News First Live Kannada


Leave a Reply

Your email address will not be published.