ಭೀಕರ ಬ್ಲಾಕ್​ ಫಂಗಸ್​​ಗೆ ಕಾರಣ ಕೊನೆಗೂ ಸ್ಪಷ್ಟ; ಕಿರಾತಕ ಕೊರೊನಾದ್ದೇ ಇಲ್ಲೂ ಹಾವಳಿ

ಭೀಕರ ಬ್ಲಾಕ್​ ಫಂಗಸ್​​ಗೆ ಕಾರಣ ಕೊನೆಗೂ ಸ್ಪಷ್ಟ; ಕಿರಾತಕ ಕೊರೊನಾದ್ದೇ ಇಲ್ಲೂ ಹಾವಳಿ

ಭೀಕರ.. ಭೀಭತ್ಸ.. ಭಯಂಕರ ಹೀಗೆ ಏನೇ ಹೆಸರು ಕೊಟ್ಟರೂ ಸೂಟ್​ ಆಗುವಂಥ ಖಾಯಿಲೆ ಅಂದ್ರೆ ಅದು ಬ್ಲಾಕ್ ಫಂಗಸ್ ಇನ್​ಫೆಕ್ಷನ್.. ಈ ಸೋಂಕು ತಗುಲಿದವರಲ್ಲಿ ಸಾವಿನ ಪ್ರಮಾಣವೂ ಅತ್ಯಧಿಕ.. ಶೇ.50 ರಷ್ಟು ಇದ್ರಲ್ಲಿ ಸಾವಿನ ಪ್ರಮಾಣ ಅಂತಾ ತಜ್ಞರು ಮಾಹಿತಿ ನೀಡ್ತಾರೆ.. ಅತಿ ಬೇಗನೇ ಗೊತ್ತಾದರೆ ಇದಕ್ಕೆ ಚಿಕಿತ್ಸೆ ನೀಡಿ ಗುಣ ಪಡಿಸಬಹುದು.. ಆದ್ರೆ ಪ್ರಾರಂಭದಲ್ಲಿ ಉದಾಸೀನ ಮಾಡಿದ ಹಲವರ ಕಣ್ಣಿಗೆ ಇದು ಸೋಂಕಿದ್ದರಿಂದ ಕಣ್ಣುಗಳನ್ನೇ ತೆಗೆದು ಹಾಕಲಾಗಿದೆ.. ಹಲವರು ತಮ್ಮ ಪ್ರಾಣವನ್ನೇ ಬಿಟ್ಟಿದ್ದೀದ್ದಾರೆ.. ಇದರ ಚಿಕಿತ್ಸಾ ವೆಚ್ಚವೂ ಅತಿ ಹೆಚ್ಚು.. ಸರಿ ಸುಮಾರು 30 ರಿಂದ 50 ಸಾವಿರ ಪ್ರತಿ ದಿನ ಇದರ ಚಿಕಿತ್ಸೆಗೆ ತಗುಲುತ್ತೆ.. ಇಂಥ ಭಯಂಕರ ಸೋಂಕು ಈಗ ಹೆಚ್ಚಾಗಿದೆ.

ಅದ್ರಲ್ಲೂ ಕೊರೊನಾ ಸೋಂಕಿನ ಎರಡನೇ ಅಲೆ ವೇಳೆ ದೇಶಾದ್ಯಂತ ಹಲವಾರು ಸೋಂಕಿತರು ಮತ್ತು ಸೋಂಕಿನಿಂದ ಗುಣವಾದವರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ರೆ. ದೆಹಲಿ, ಗುಜರಾತ್, ರಾಜಸ್ಥಾನ್, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ ಹೀಗೆ ದೇಶದ ಉದ್ದಗಲಕ್ಕೂ ಅತಿ ಹೆಚ್ಚಾಗಿ ಈ ಸೋಂಕು ಈಗ ಹಾವಳಿ ಆರಂಭಿಸಿದೆ. ಹೀಗಾಗಿ ಇದ್ರ ಬಗ್ಗೆ ಸಾಕಷ್ಟು ಆತಂಕವೂ ಉಂಟಾಗ್ತಿದೆ. ಜೊತೆಗೆ ಈ ಸೋಂಕಿಗೆ ಕಾರಣವೇನು? ಅನ್ನೋ ಪ್ರಶ್ನೆಯೂ ಮೂಡುತ್ತಿದೆ. ಹಲವು ವೈದ್ಯರು ಹೆಚ್ಚಾಗಿ ಸ್ಟಿರಾಯ್ಡ್ ಕೊಡ್ತಿರೋದ್ರಿಂದಾಗಿ ರೋಗ ನಿರೋಧಕ ಶಕ್ತಿ ಕುಂದುತ್ತದೆ.. ಹೀಗಾಗಿ ಬ್ಲಾಕ್​ ಫಂಗಸ್ ಕಾಣಿಸಿಕೊಂಡಿರಬಹುದು ಅಂತಾರೆ.. ಇನ್ನೂ ಕೆಲವರು ಶುಗರ್ ಹೆಚ್ಚಾಗಿರೋದ್ರಿಂದ, ಐಸಿಯೂನಲ್ಲಿ ಚಿಕಿತ್ಸೆ ಪಡೆದವರಲ್ಲಿ.. ಜೊತೆಗೆ ಕೃತಕ ಆಕ್ಸಿಜೆನ್ ಪಡೆದವರಲ್ಲಿ ಈ ಸೋಂಕು ಹೆಚ್ಚು ಕಾಣಿಸಿಕೊಳ್ತಿದೆ ಎನ್ನುತ್ತಾರೆ. ಇನ್ನೂ ಕೆಲವರು ಭಾರತದಲ್ಲಿ ಅನುಸರಿಸುತ್ತಿರುವ ಕೊರೊನಾ ಚಿಕಿತ್ಸಾ ವಿಧಾನವೇ ಸರಿ ಯಿಲ್ಲ.. ಈ ವಿಧಾನದ ಕಾರಣದಿಂದ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತೆ ಮತ್ತು ಇದರಿಂದಾಗಿಯೇ ಸೋಂಕು ಬರುತ್ತಿದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದಕ್ಕೆ ಕಾರಣ ಏನು? ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ..

ಮ್ಯೂಟೇಶನ್ನೇ ಕಾರಣಾನಾ?

ಭಾರತದಲ್ಲಿ ಎರಡನೇ ಅಲೆ ಕೊರೊನಾ ಉಂಟಾಗಲು ಪ್ರಮುಖ ಕಾರಣ ಅಂದ್ರೆ ಕೊರೊನಾ ವೈರಸ್​ನ ರೂಪಾಂತರ.. ಈ ರೂಪಾಂತರಿ ವೈರಸ್​​ ಹೆಚ್ಚು ಅಪಾಯಕಾರಿ ಕೂಡ ಆಗಿದ್ದು, ಹಲವು ಸೋಂಕಿತರು ಪ್ರಾಣ ಕಳೆದುಕೊಳ್ಳಲು ಕಾರಣವಾಗಿದೆ. ಇದೇ ರೂಪಾಂತರಿ ವೈರಸ್​ ಬ್ಲಾಕ್​ ಫಂಗಸ್ ಸೋಂಕು ಹೆಚ್ಚಲು ಕಾರಣವಾಗಿದೆ ಅನ್ನೋದು ಈಗ ಸ್ಪಷ್ಟವಾಗಿದೆ.

ಡಾ. ತಾತ್ಯಾರಾವ್, ಡೈರೆಕ್ಟರ್

ಹೌದು.. ಈ ಬಗ್ಗೆ ಈಗ ಡೈರೆಕ್ಟರೇಟ್ ಆಫ್ ಮೆಡಿಕಲ್ ರೀಸರ್ಚ್​ ಅಂಡ್ ಎಜ್ಯುಕೇಷನ್​​​ನ ಡೈರೆಕ್ಟರ್, ಡಾ. ತಾತ್ಯಾರಾವ್ ಲಹಾನೆಯವರು ಮಾಹಿತಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ್, ಕೊರೊನಾ ಸೋಂಕಿನ ಚಿಕಿತ್ಸಾ ವಿಧಾನವನ್ನು ಈ ವಿಷಯದಲ್ಲಿ ದೂಷಿಸೋದು ಸರಿಯಲ್ಲ.. ಮ್ಯೂಕೋರ್​ಮೈಕೋಸಿಸ್ ಅಂದ್ರೆ ಬ್ಲಾಕ್​ ಫಂಗಸ್ ಹೆಚ್ಚಲು ಇದು ಕಾರಣ ಅಂತಾ ಹೇಳಲು ಸಾಧ್ಯವಿಲ್ಲ.. ಈ ರೂಪಾಂತರಿ ಕೊರೊನಾ ವೈರಸ್​, ನಮ್ಮ ಜಠರದಲ್ಲಿರುವ ಬೀಟಾ ಅನ್ನೋ ಜೀವಕೋಶಗಳಿಗೆ ಹಾನಿ ಮಾಡುತ್ತಿವೆ. ಈ ಕಾರಣದಿಂದಾಗಿ ಸೋಂಕಿತರಲ್ಲಿ ಶುಗರ್ ಪ್ರಮಾಣ ಅತ್ಯಂತ ಹೆಚ್ಚಾಗುತ್ತಿದೆ. ಹೀಗಾಗಿ, ರೋಗ ನಿರೋಧಕ ಶಕ್ತಿಯೂ ಕುಂದಿ ಬ್ಲಾಕ್​ ಫಂಗಸ್ ಹೆಚ್ಚಲು ಕಾರಣವಾಗ್ತಿದೆಯಂತೆ.

ಇದೇ ಹಿನ್ನೆಲೆಯಲ್ಲಿ ನೋಡಿದಾಗ, ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದುಕೊಳ್ಳುವುದರ ಮೂಲಕ, ಉತ್ತಮವಾದ ಮಾಸ್ಕ್​ಗಳನ್ನು ಧರಿಸುವುದರ ಮೂಲಕ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ, ತಮಗೆ ಸೋಂಕು ಬರದಂತೆ ನೋಡಿಕೊಳ್ಳಬೇಕು.. ಒಂದು ವೇಳೆ ಯಾರಿಗೇ ಸೋಂಕು ಬಂದರೂ ಮತ್ತೊಬ್ಬರಿಗೆ ಅದು ಹರಡದಂತೆ ನೋಡಿಕೊಳ್ಳಬೇಕು. ಜೊತೆಗೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಮತ್ತು ತಮ್ಮ ದೇಹದಲ್ಲಿ ಏನೇ ತೊಂದರೆ ಎನಿಸದರೂ ತಕ್ಷಣವೇ ವೈದ್ಯರನ್ನು ಕಾಣಬೇಕು. ಈ ಮೂಲಕ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು.. ತಮ್ಮ ಕುಟುಂಬವನ್ನೂ ರಕ್ಷಿಸಬೇಕು.. ಆಗ ಮಾತ್ರ ಕೊರೊನಾ, ಬ್ಲಾಕ್​ ಫಂಗಸ್ ಮುಂತಾದ ಸೋಂಕಿನಿಂದ ಪಾರಾಗಲು ಸಾಧ್ಯವಾಗುತ್ತೆ ಅನ್ನೋದನ್ನ ಎಲ್ಲ ನೆನಪಿನಲ್ಲಿ ಇಡಬೇಕಿರೋದು ಅತಿ ಮುಖ್ಯ..

 

The post ಭೀಕರ ಬ್ಲಾಕ್​ ಫಂಗಸ್​​ಗೆ ಕಾರಣ ಕೊನೆಗೂ ಸ್ಪಷ್ಟ; ಕಿರಾತಕ ಕೊರೊನಾದ್ದೇ ಇಲ್ಲೂ ಹಾವಳಿ appeared first on News First Kannada.

Source: newsfirstlive.com

Source link