ಬಿಗ್​​ಬಾಸ್ ಸ್ಪರ್ಧಿ, ವಿವಾದಾತ್ಮಕ ಸಿನಿಮಾ ವಿಮರ್ಶೆಗಳ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ಟಾಲಿವುಡ್​ ನಟ ಕತ್ತಿ ಮಹೇಶ್​ ಅವರು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊಡವಲೂರು ಬಳಿ ಅಪಘಾತ ಸಂಭವಿಸಿದೆ.

ಲಾರಿ ಹಿಂಬದಿಗೆ ಮಹೇಶ್​ ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿರುವ ಪರಿಣಾಮ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಕೂಡಲೇ ಅವರನ್ನು ನೆಲ್ಲೂರಿನ ಮೆಡಿಕವರ್​ ಕಾರ್ಪೊರೇಟ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನ ತಲೆ, ಕಣ್ಣಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಶಿಫ್ಟ್​ ಮಾಡಲಾಗುತ್ತಿದೆ ಎಂದು ಕತ್ತಿ ಮಹೇಶ್ ಸಹೋದರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿದ್ದ ಚಾಲಕ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸುರಕ್ಷಿತವಾಗಿದ್ದು, ನಟ ಸೀಟ್​ ಬೆಲ್ಟ್​ ಧರಿಸದ ಕಾರಣ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

The post ಭೀಕರ ರಸ್ತೆ ಅಪಘಾತದಲ್ಲಿ ಟಾಲಿವುಡ್​​ ನಟ ಗಂಭೀರ -ಐಸಿಯುನಲ್ಲಿ ಚಿಕಿತ್ಸೆ appeared first on News First Kannada.

Source: newsfirstlive.com

Source link