ಹಾಲಿವುಡ್​ ಸ್ಟಾರ್​ ಹಾಗೂ ಜನಪ್ರಿಯ ಅಡ್ವೆಂಚರ್ ಟಾರ್ಜನ್ ಸಿನಿಮಾದ ಹೀರೋ ಜೋ ಲಾರಾ ವಿಮಾದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. 58 ವರ್ಷದ ಲಾರಾ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಟಿಎಂಝೆಡ್​ ಮಾಡಿರುವ ವರದಿ ಪ್ರಕಾರ.. ಖಾಸಗಿ ಜೆಟ್​ Cessna 501ನಲ್ಲಿ ಶನಿವಾರ ಅನಾಟೋಲಿಯಾದ ಸ್ಮಿರ್ನಾ (Smyrna) ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಪಲ್ಮ್​​ ಬೀಚ್​ ಕಡೆಗೆ ಪ್ರಯಾಣ ಬೆಳೆಸಿತ್ತು. ಟೇಕ್ ಆಫ್​ ಆದ ಕೆಲವೇ ನಿಮಿಷಗಳಲ್ಲಿ ಜೆಟ್, ಪರ್ಸಿ​ ಪ್ರೀಸ್ಟ್​ ಸರೋವರಕ್ಕೆ ಬಂದು ಅಪ್ಪಳಿಸಿದೆ ಎಂದು ತಿಳಿಸಿದೆ.

ದುರ್ಘಟನೆ ಬಳಿಕ ಖಾಸಗಿ ಜೆಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರಕ್ಷಣೆಗಾಗಿ ಅಗ್ನಿಶಾಮ ಸಿಬ್ಬಂದಿ ಸೇರಿದಂತೆ ರಕ್ಷಣಾ ಪಡೆ ಸ್ಥಳಕ್ಕೆ ಆಗಮಿಸಿತ್ತು. ಆದರೆ ರಾತ್ರಿಯಾಗಿದ್ದ ಕಾರಣ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಇನ್ನು ವಿಮಾನ ಪತನಗೊಂಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ದುರ್ಘಟನೆಯಲ್ಲಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಲಾರಾ ಪತ್ನಿ ಗ್ವೇನ್ ಲಾರಾ, ಅವರ ಡಯಟ್ ಗುರು ಸೇರಿದಂತೆ ಇನ್ನು ನಾಲ್ವರು ಮೃತಪಟ್ಟಿದ್ದಾರೆ. ಲಾರಾ ಜನಪ್ರಿಯ ನಟರಾಗಿದ್ದರು.

ಅವರು 1996 ಮತ್ತು 2000 ನಡುವೆ ಫಿಕ್ಷನಲ್ ಕ್ಯಾರೆಕ್ಟರ್ ಟಾರ್ಜನ್​ ಚಿತ್ರದ 22 ಎಪಿಸೋಡ್​​ಗಳನ್ನ ಮಾಡಿ ಖ್ಯಾತಿಗಳಿಸಿದ್ದರು. ಅಲ್ಲದೇ ಟಿವಿ ಮೂವಿಗಳಲ್ಲೂ ನಟಿಸಿದ್ದರು. ಟಾರ್ಜನ್​​ ಇನ್ ಮ್ಯಾನ್ಹ್ಯಾಟನ್, ಸ್ಟೀಲ್ ಫ್ರೊಂಟೀಯರ್, ಸನ್​ಸೆಟ್​ ಹೀಟ್​, ಗನ್​​ಸ್ಮೋಕ್, ದ ಲಾಸ್ಟ್​​ ಅಪೇಕ್ ಸೇರಿದಂತೆ ಅನೇಕ ಮೂವಿಗಳಲ್ಲಿ ನಟಿಸಿದ್ದರು.

The post ಭೀಕರ ವಿಮಾನ ಅಪಘಾತ; ಟಾರ್ಜನ್ ಖ್ಯಾತಿಯ ನಟ, ಅವರ ಪತ್ನಿ ಸೇರಿ 7 ಜನರ ದುರ್ಮರಣ appeared first on News First Kannada.

Source: newsfirstlive.com

Source link