ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಮತ್ತೆ ನೆತ್ತರು ಹರಿದಿದ್ದು, ಪಟ್ಟಣ ಪಂಚಾಯತಿ ಮಾಜಿ ಸದಸ್ಯ, ಪ್ರದೀಪ್ ಎಂಟಮಾನನ್ನ ಭೀಕರವಾಗಿ ಕಗ್ಗೊಲೆ ಮಾಡಲಾಗಿದೆ.
ಪ್ರದೀಪ ಎಂಟಮಾನ ರೌಡಿ ಶೀಟರ್ ಕೂಡ ಆಗಿದ್ದ. ನಿನ್ನೆ ರಾತ್ರಿ ಆಲಮೇಲ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ಬಂದಿದ್ದ ವೇಳೆ ನಾಲ್ಕೈದು ಜನರಿಂದ ಅಟ್ಯಾಕ್ ಆಗಿದೆ. ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದು ಪ್ರದೀಪ್ನನ್ನ ಸ್ಥಳದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆಲಮೇಲ ಪೊಲೀಸರ ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
2011ರಲ್ಲಿ ಪರಶುರಾಮ ಮೇತ್ರಿ ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರದೀಪ್ ಹೆಸರು ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ 2013 ರಂದು ಪ್ರದೀಪ್ ಮೇಲೆ ಗುಂಡಿನ ದಾಳಿ ಕೂಡ ನಡೆದಿತ್ತು. ಸೌದಾಗರ ಎಂಬಾತ ಸುಫಾರಿ ಪಡೆದು ಪ್ರದೀಪ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ನಂತರ ಎಂಟಮಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದ. ಬಳಿಕ ರಾಜಕೀಯಕ್ಕೆ ಧುಮುಕಿ ಪಟ್ಟಣ ಪಂಚಾಯತಿ ಸದಸ್ಯ ಆಗಿದ್ದ.